CONNECT WITH US  

ಸಾಲಮನ್ನಾ ಮಾಡಿ ಇಲ್ಲವೇ ರಾಜೀನಾಮೆ ನೀಡಿ: ಶೆಟ್ಟರ್‌

ಹಾವೇರಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ತಾವು ಚುನಾವಣೆ ಪೂರ್ವ ಜೆಡಿಎಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಇಲ್ಲವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೇಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರಿಗೆ ನಿಜವಾಗಿಯೂ ರೈತರ ಪರ ಕಾಳಜಿ ಇದ್ದಿದ್ದರೆ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುವಾಗಲೇ ರೈತರ ಸಂಪೂರ್ಣ ಸಾಲಮನ್ನಾ ಮಾಡುವ ಷರತ್ತಿನೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಿತ್ತು. ಅಧಿಕಾರದಾಸೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ಬಂದು, ಈಗ ತಮಗೆ ಜನರ ಮರ್ಜಿಯಿಲ್ಲ. ಕಾಂಗ್ರೆಸ್‌ನ ಮರ್ಜಿ ಕಾಯಬೇಕಾಗಿದೆ ಎನ್ನುತ್ತಿರುವುದು ವಿಷಾದನೀಯ ಎಂದರು.

ತಮ್ಮ ಪುತ್ರ ಕುಮಾರಸ್ವಾಮಿ ಇನ್ನೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂಬ ಮಾಜಿ ಪ್ರಧಾನಿ ದೇವೇಗೌಡರ ಕೊನೆಯಾಸೆ ಈಡೇರಿದೆ. ಅದೆಷ್ಟು ದಿನ ಈ ಸರ್ಕಾರ ಇರುತ್ತೋ, ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತಾರೋ ನೋಡಬೇಕು. ಕಾಂಗ್ರೆಸ್‌ನಲ್ಲಿ ಸಾಕಷ್ಟು ಒಳ ಬೇಗುದಿಯಿದೆ. ಅದು ಯಾವಾಗ ಬೇಕಾದ್ರೂ ಸ್ಫೋಟ ಆಗಬಹುದು. ಈಗಾಗಲೇ ಎಸ್‌.ಆರ್‌. ಪಾಟೀಲ್‌ ರಾಜೀನಾಮೆ ಕೊಟ್ಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರಗೂ ಅಸಮಾಧಾನವಿದೆ. ರಾಹುಲ್‌ ಗಾಂಧಿ ದೇವೇಗೌಡರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ ನಿರ್ನಾಮ ಆಗಲಿದೆ ಎಂದರು.

Trending videos

Back to Top