CONNECT WITH US  

ಬಾದಾಮಿ: 5 ದಿನಗಳ ಕಾಲ ಜನರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ  ಮಾನ ಉಳಿಸಿದ್ದ  ಬಾದಾಮಿ ಕ್ಷೇತ್ರದಲ್ಲಿ 5 ದಿನಗಳ ಕಾಲ ಜನರೊಂದಿಗೆ ಸೇರಿ ಅಹವಾಲುಗಳನ್ನು ಆಲಿಸಲಿದ್ದಾರೆ.

ಕ್ಷೇತ್ರದಲ್ಲಿ  ಶ್ರೀರಾಮುಲು ವಿರುದ್ಧ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಳಿಕ ಕ್ಷೇತ್ರಕ್ಕೆ ಆಗಮಿಸಿರಲಿಲ್ಲ. ಈ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು.  

ಸಂಪುಟ ವಿಸ್ತರಣೆ ವಿಚಾರದಲ್ಲಿ  ಬಿಡುವಿಲ್ಲದ ಕಾರ್ಯಚಟುವಟಿಕೆಯಲ್ಲಿ ನಿರತರಾಗಿದ್ದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರು ಇದೀಗ 5 ದಿನಗಳನ್ನು ಕ್ಷೇತ್ರದ ಸಮಸ್ಯೆಗಳನ್ನು ಆಲಿಸಲು , ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಮೀಸಲಿಟ್ಟಿದ್ದಾರೆ. 

ಗುರುವಾರ ಬೆಳಗ್ಗೆ ಬಾದಾಮಿಯ ಬನಶಂಕರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅವರ ಪ್ರವಾಸ ಆರಂಭವಾಗುತ್ತದೆ. ಸಾಲಬಾಧೆಯಿಂದ ಸಾವಿಗೆ ಶರಣಾದ ಜಮ್ಮನಕಟ್ಟಿಯ ರೈತ ರಾಜಪ್ಪ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಲಿದ್ದಾರೆ. 

ಕಾಂಗ್ರೆಸ್‌ ಕಾರ್ಯಕರ್ತರ ಸಭೆಗಳು, ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಸಭೆಗಳು ಸಂಜೆ ಇಫ್ತಾರ್‌ ಕೂಟ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ  ಭಾಗಿಯಾಗಲಿದ್ದಾರೆ. 

Trending videos

Back to Top