CONNECT WITH US  

ಬೇಸರ ಸಹಜ,ಯಾರೂ ಪಕ್ಷ ಬಿಡಲ್ಲ: ಸಿದ್ದರಾಮಯ್ಯ

ಬಾಗಲಕೋಟೆ: ಸಚಿವ ಸ್ಥಾನ ಸಿಗದವರಿಗೆ ಬೇಸರ ಆಗುವುದು ಸಹಜ. ಪಕ್ಷದಲ್ಲಿ ಕೆಲವರಿಗೆ ಅಸಮಾಧಾನ
ಇರುವುದೂ ನಿಜ. ಆದರೆ,ಅವರೆಲ್ಲ ಪಕ್ಷ ಬಿಟ್ಟು ಹೋಗಲ್ಲ. ಎಲ್ಲರನ್ನೂ ಸಮಾಧಾನಪಡಿಸುತ್ತೇವೆ ಎಂದು ಮಾಜಿ
ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ಬಿ.ಎನ್‌ ಜಾಲಿಹಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಎಂ.ಬಿ.ಪಾಟೀಲ ನನ್ನನ್ನು ಭೇಟಿ ಮಾಡಿದ್ದಾರೆ. ಆದರೆ,ಕಣ್ಣೀರು ಹಾಕಿಲ್ಲ. ಅವರನ್ನು ನಾನು ಸಮಾಧಾನ ಮಾಡಿದ್ದೇನೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಸಮಾಧಾನ ಮಾಡಿದ್ದಾರೆ ಎಂದರು. ಎಂ.ಬಿ.ಪಾಟೀಲ ನನ್ನ ಜತೆಗೆ 22 ಶಾಸಕರಿದ್ದಾರೆ ಎಂದಿದ್ದಾರೆ.ಅವರಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಗರಂ ಆದ ಸಿದ್ದರಾಮಯ್ಯ, ಹಿನ್ನಡೆ ಅಂದರೇನು ಎಂದು ಮರು ಪ್ರಶ್ನೆ ಹಾಕಿದರು. ನಾನು ಪ್ರಮುಖರ ಮನವೊಲಿಕೆಗೆ ಬೆಂಗಳೂರಿಗೆ ಮರಳಿ ಹೋಗುವುದಿಲ್ಲ.

ನಾನು ಯಾಕೆ ಬೆಂಗಳೂರಿಗೆ ಹೋಗಬೇಕು. ಎಲ್ಲರನ್ನೂ ಸಮಾಧಾನ ಮಾಡಿದ್ದೇವೆ. ಮಾಜಿ ಸಚಿವ ಸತೀಶ
ಜಾರಕಿಹೊಳಿ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ವಿಷಯ ನನಗೆ ಗೊತ್ತಿಲ್ಲ.

ಕಾಂಗ್ರೆಸ್‌ನಿಂದ ಹೊರ ಬರುವಂತೆ ಕುರುಬ ಸಮಾಜದ ಶಾಸಕರಿಗೆ ಕರೆ ನೀಡಿರುವ ಕುರುಬರ ಸಂಘದ ಅಧ್ಯಕ್ಷ
ಯಾರು ಎಂಬುದೂ ನನಗೆ ಗೊತ್ತಿಲ್ಲ ಎಂದರು.


Trending videos

Back to Top