CONNECT WITH US  

ಭಾರತ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂ.1

ಕೊಪ್ಪಳ: ದೇಶದ ಜನರು ಯಾವುದರಲ್ಲೂ ಮುಂದಿಲ್ಲ. ಆದರೆ, ಮಕ್ಕಳನ್ನು ಹುಟ್ಟಿಸೋದ್ರಲ್ಲಿ ನಂ.1 ಸ್ಥಾನದಲ್ಲಿದ್ದಾರೆ
ಎಂದು ಮಾಜಿ ಸಚಿವ ಎಚ್‌.ಆಂಜನೇಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕುಷ್ಟಗಿಯ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಮಕ್ಕಳನ್ನು ಹುಟ್ಟಿಸುವಲ್ಲಿ ಮುಂದಿದ್ದೇವೆ.ನವ ಜೋಡಿಗಳು ಕೇವಲ 2 ಮಕ್ಕಳನ್ನು ಹುಟ್ಟಿಸಬೇಕು. ಒಂದೇ ಸಾಕೆನಿಸುತ್ತದೆ. ನನಗೂ ಸಹಿತ ಇಬ್ಬರು ಮಕ್ಕಳಿದ್ದಾರೆ.

3ನೇ ಮಗು ಬೇಕೆಂದರೂ ನಾನು ಕಟ್‌ ಮಾಡಿಸಿ ಬಿಟ್ಟೆ. ಅಲ್ಲದೆ, ದಲಿತ ಸಮುದಾಯ ಬರಿ ಕುಡಿತದಲ್ಲೇ ಕಾಲ
ಕಳೆಯುತ್ತೆ. ಕೋಣ, ಕುರಿ, ಎಣ್ಣೆ ಹೊಡೆದು ನಮ್ಮ ಜನರು ವಾರಗಟ್ಟಲೇ ನಶೆಯಲ್ಲಿರುತ್ತಾರೆ. ದೇವರ ಪೂಜೆ
ಮಾಡೋದನ್ನು ಬಿಡಿ. ಬಸವಣ್ಣ ಹೇಳಿದಂತೆ ಕಾಯಕವೇ ಕೈಲಾಸ ಎಂದು ನಂಬಿ ಕೆಲಸ ಮಾಡಿ. ಕೆಲಸದಲ್ಲಿಯೇ
ದೇವರನ್ನು ಕಾಣಬೇಕು ಎಂದರು.

ರೂಪಾ ಶಶಿಧರ್‌ಗೂ ಸಚಿವ ಸ್ಥಾನ ಕೊಡಿ: ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆಂಜನೇಯ, ರಾಜ್ಯದಲ್ಲಿ
ಮಾದಿಗ ದೊಡ್ಡ ಸಮುದಾಯವಿದೆ. ಆದರೆ ಎಸ್‌ಸಿಯಲ್ಲಿ ಎಡಗೈಗೆ ಸಚಿವ ಸ್ಥಾನ ಸಿಕ್ಕಿಲ್ಲ. ಶಾಸಕಿ ರೂಪಾ ಶಶಿಧರ್‌
ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಹೈಕಮಾಂಡ್‌ಗೆ ಒತ್ತಾಯ ಮಾಡುವೆ ಎಂದು ಹೇಳಿದರು.

ಇಂದು ಹೆಚ್ಚು ಓದಿದ್ದು

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top