ಮೊಹಮದ್ ನಲಪಾಡ್ ಹ್ಯಾರಿಸ್ಗೆ ಜಾಮೀನು;3 ತಿಂಗಳ ಬಳಿಕ ಜೈಲಿಂದ ಹೊರಗೆ
Team Udayavani, Jun 14, 2018, 10:55 AM IST
ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣದ ಸಂಬಂಧ ಮೂರು ತಿಂಗಳಿನಿಂದ ಜೈಲಿನಲ್ಲಿದ್ದ ಆರೋಪಿ ಮೊಹಮದ್ ನಲಪಾಡ್ ಹ್ಯಾರಿಸ್ಗೆ ಹೈಕೋರ್ಟ್ ಗುರುವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ಅರ್ಜಿ ವಿಚಾರಣೆ ಯನ್ನು ಹೈಕೋರ್ಟ್ ಬುಧವಾರ ಪೂರ್ಣಗೊಳಿಸಿತ್ತು. 2 ಲಕ್ಷ ರೂಪಾಯಿ ಬಾಂಡ್, 2 ಶ್ಯೂರಿಟಿಯನ್ನು ಪಡೆದು ಜಾಮೀನು ನೀಡಿದೆ.
ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ಪೀಠದ ಮುಂದೆ ನಲಪಾಡ್ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ಹಾಗೂ ಪ್ರಾಸಿಕ್ಯೂಶನ್ ಪರ ವಿಶೇಷ ಅಭಿಯೋಜಕ ಶ್ಯಾಮ್ಸುಂದರ್ ಅವರು ವಾದ-ಪ್ರತಿವಾದ ನಡೆಸಿದ್ದರು.