CONNECT WITH US  

ಕೈಗಾದಲ್ಲಿ ದಾಖಲೆ ವಿದ್ಯುತ್‌ ಉತ್ಪಾದನೆ

ಕಾರವಾರ: ಕೈಗಾದಲ್ಲಿ 766 ದಿನ ಸತತವಾಗಿ ಅಣುವಿದ್ಯುತ್‌ ಉತ್ಪಾದಿಸಿ ದಾಖಲೆ ಮಾಡಲಾಗಿದೆ. ಯುನಿಟ್‌ 1ರಿಂದ 220 ಮೆಗಾವ್ಯಾಟ್‌ ವಿದ್ಯುತ್‌ ಸತತವಾಗಿ 766 ದಿನ ಉತ್ಪಾದಿಸಿದ್ದು ದಾಖಲೆಯಾಗಿದೆ. ವಿಶ್ವದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾ 766 ದಿನ ಅಣುವಿದ್ಯುತ್‌ ಉತ್ಪಾದಿಸಿದ ಸುರಕ್ಷಿತ ಘಟಕ ಎಂಬ ಹೆಗ್ಗಳಿಕೆಗೆ ಕೈಗಾ ಘಟಕ-1 ಪಾತ್ರವಾಗಿದೆ.

ಈ ಹಿಂದೆ ರಾಜಸ್ಥಾನದ ಅಣುವಿದ್ಯುತ್‌ ಘಟಕ 765 ದಿನ ವಿದ್ಯುತ್‌ ಉತ್ಪಾದಿಸಿದ ದಾಖಲೆ ಇತ್ತು. ಈ ದಾಖಲೆಯನ್ನು ಕೈಗಾ ಅಣುವಿದ್ಯುತ್‌ ಘಟಕ ಮುರಿದಿದೆ. ಕೈಗಾ ಘಟಕಗಳು ಅತ್ಯಂತ ಸುರಕ್ಷಿತವಾಗಿದ್ದು, ದಾಖಲೆ ಪ್ರಮಾಣದಲ್ಲಿ
ವಿದ್ಯುತ್‌ ಉತ್ಪಾದಿಸಿ ಅನೇಕ ಸಲ ಪರಿಸರ ಪೂರಕ ಮತ್ತು ಸುರಕ್ಷಿತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.

2009ರಲ್ಲಿ ಘಟಕ-2ರಿಂದ ಸತತವಾಗಿ 529 ದಿನ ವಿದ್ಯುತ್‌ ಉತ್ಪಾದಿಸಿ ದಾಖಲೆ ಮಾಡಲಾಗಿತ್ತು.
2016-17ನೇ (ನವೆಂಬರ್‌) ಸಾಲಿನಲ್ಲಿ ಘಟಕ 3ರಿಂದ 550 ದಿನ ವಿದ್ಯುತ್‌ ಉತ್ಪಾದಿಸಿ ದಾಖಲೆ ಮಾಡಲಾಗಿತ್ತು. ಇದೀಗ ಘಟಕ-1ರಿಂದ ಸತತ 766 ದಿನ ವಿದ್ಯುತ್‌ ಉತ್ಪಾದಿಸಿ ದಾಖಲೆ ಮಾಡಲಾಗಿದೆ. ಈ ಸಂಬಂಧ ಅಧಿಕೃತ
ಘೋಷಣೆ ಜೂ.18ರಂದು ಹೊರಬೀಳಲಿದೆ.

ಕೈಗಾದಲ್ಲಿ 4 ಅಣು ವಿದ್ಯುತ್‌ ಉತ್ಪಾದನಾ ಘಟಕಗಳಿದ್ದು, ಎಲ್ಲಾ ಘಟಕಗಳಿಂದ ತಲಾ 220 ಮೆ.ವ್ಯಾ.ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಕೈಗಾ ಘಟಕ-1 ವಿದ್ಯುತ್‌ ಉತ್ಪಾದನೆಯನ್ನು 2000ರಲ್ಲಿ ಪ್ರಾರಂಭಿಸಿತು. ಘಟಕ - 1 1998ರಿಂದ ವಿದ್ಯುತ್‌ ಉತ್ಪಾದನೆಯನ್ನು ಪ್ರಾರಂಭಿಸಿತ್ತು ಎಂಬುದು ಇಲ್ಲಿ ಗಮನಾರ್ಹ.

ಜೂ.17ಕ್ಕೆ 766 ದಿನಗಳ ಯುನಿಟ್‌ನ್ನು ಶಟ್‌ ಡೌನ್‌ ಮಾಡದೇ ವಿದ್ಯುತ್‌ ಉತ್ಪಾದಿಸಿ ದಾಖಲೆ ಮಾಡಿರುವ ಸಂಗತಿಯನ್ನು ಕೈಗಾ ಉನ್ನತಾಧಿಕಾರಿಗಳು ದೃಢಪಡಿಸಿದ್ದಾರೆ. ಅಧಿಕೃತ ಘೋಷಣೆಯನ್ನು ಕೈಗಾ ನಿರ್ದೇಶಕರು ಸೋಮವಾರ ಹೊರಡಿಸಲಿದ್ದಾರೆಂದು ಮೂಲಗಳು ಹೇಳಿವೆ


Trending videos

Back to Top