CONNECT WITH US  

ಡಿಕೆಶಿಗೆ ಐಟಿ ನೊಟೀಸ್‌:ಯಾರೂ ಗಾಬರಿಯಾಗುವುದು ಬೇಡ;ಸಿಎಂ ಎಚ್‌ಡಿಕೆ 

ಬೆಂಗಳೂರು:ವೈದ್ಯಕೀಯ ಹಾಗೂ ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ ಕುರಿತು ಯಾರೂ ಗಾಬರಿಯಾಗಬೇಕಾಗಿಲ್ಲ,ಅವರು ರಾಜೀನಾಮೆ ಕೊಡಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೊಟೀಸ್‌ಗೆ ಅವರು  ಕಾನೂನು ಬದ್ಧ ವಾಗಿ  ಹೋರಾಟ ಮಾಡುತ್ತಿದ್ದಾರೆ.ಅದಕ್ಕೆ ದೊಡ್ಡ ಮಟ್ಟದಲ್ಲಿ ಮಹತ್ವ ಕೊಡಬೇಕಾದುದ್ದು ಅನಾವವ್ಯಕ. ಈ ವಿಚಾರದಲ್ಲಿ  ಯಾರೂ ಗಾಬರಿಯಾಗುವುದು ಬೇಡ ಎಂದರು. 

ಬಿಜೆಪಿಯವರು ರಾಜೀನಾಮೆ ಆಗ್ರಹಿಸಿದ್ದಾರೆ ಎಂದಿದ್ದಕ್ಕೆ ಪ್ರತಿಕ್ರಿಯಿಸಿ  ಬಿಜೆಪಿಯವರು ಎಷ್ಟು ಬಾರಿ ರಾಜೀನಾಮೆ ಕೊಟ್ಟಿದ್ದಾರೆ. ಬಿಜೆಪಿಯವರು ಒತ್ತಾಯ ಮಾಡಬೇಕಾಗಿಲ್ಲ. ಯಾವಾಗ ಕೊಡಬೇಕು ಆಗ ಕೊಡ್ತಾರೆ ಎಂದರು. 

Trending videos

Back to Top