CONNECT WITH US  

ನಾಗತಿಹಳ್ಳಿ ಚಂದ್ರಶೇಖರ್‌ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ಬೆಂಗಳೂರು : ಖ್ಯಾತ ಸಾಹಿತಿ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ

ನಾಗತಿಹಳ್ಳಿ ಚಂದ್ರಶೇಖರ್‌ ಅವರು ಈ ವರೆಗೆ 13 ಚಲನಚಿತ್ರಗಳನ್ನು, ಆರು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ; ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಕನ್ನಡ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದ ನಾಗತಿಹಳ್ಳಿ ಅವರು ಅನಂತರ ಚಲನಚಿತ್ರ ರಂಗದತ್ತ ಹೊರಳಿದರು. ಅವರು ನಿರ್ದೇಶಿಸಿರುವ 13 ಚಿತ್ರಗಳ ಪೈಕಿ ಉಂಡೂಹೋದ ಕೊಂಡೂ ಹೋದ, ಅಮೆರಿಕ ಅಮೆರಿಕ, ಬಾನಲ್ಲೆ ಮಧುಚಂದ್ರಕೆ, ಹೂಮಳೆ, ಸೂಪರ್‌ ಸ್ಟಾರ್‌, ಅಮೃತಧಾರೆ ಮುಖ್ಯವಾಗಿವೆ.

ನಾಗತಿಹಳ್ಳಿ ಅವರಿಗೆ 2005ರಲ್ಲಿ ಮೈಸೂರು ವಿವಿ ಗೌರವ ಡಾಕ್ಟರೇಟ್‌ ಪದವಿ ಮತ್ತು 2015ರಲ್ಲಿ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ಲಭಿಸಿದೆ. 

ಸಿದ್ಧರಾಮಯ್ಯ ಅವರ ಸರಕಾರದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಖ್ಯಾತ ಚಿತ್ರ ನಿರ್ಮಾಪಕ, ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರ ರಾಜೀನಾಮೆಯಿಂದ ತೆರವಾಗಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ಈಗ ನಾಗತಿಹಳ್ಳಿ ತುಂಬಿದ್ದಾರೆ. 

Trending videos

Back to Top