CONNECT WITH US  

ಯೋಗ ಕಾರ್ಯಕ್ರಮ ಬಹಿಷ್ಕರಿಸಿದ ಸಂಸದ

ಅಧಿಕಾರಿಯಿಂದ ಮನವೊಲಿಸುವ ಪ್ರಯತ್ನ.

ಕೊಪ್ಪಳ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಬೆಳಗ್ಗೆ 6 ಗಂಟೆಗೆ ಜಿಲ್ಲಾಡಳಿತದಿಂದ ಯೋಗ ದಿನಾಚರಣೆಯ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಸಂಸದ ಸಂಗಣ್ಣ ಕರಡಿ ಬೆಳಗ್ಗೆ 6 ಗಂಟೆ ಮುನ್ನವೇ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೆ, ಅಧಿಕಾರಿಗಳಾರೂ ಸ್ಥಳಕ್ಕೆ
ಆಗಮಿಸಿರಲಿಲ್ಲ. ಸಂಸದರು ಕೆಲವು ನಿಮಿಷ ಮೈದಾನದಲ್ಲಿ ವಾಕಿಂಗ್‌ ಮಾಡಿದರು.

ಆದರೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಲಿಲ್ಲ. ಅಧಿಕಾರಿಗಳ ವರ್ತನೆಗೆ ಆಕ್ರೋಶಗೊಂಡ ಸಂಸದರು, ನಾನು ಕಾರ್ಯಕ್ರಮವನ್ನು ಬಹಿಷ್ಕಾರ ಮಾಡುತ್ತಿದ್ದೇನೆ. ಜಿಲ್ಲಾಡಳಿತದ ವೈಖರಿ ವಿರುದಟಛಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಎಂಗೆ ದೂರು ನೀಡುವುದಾಗಿ ಹೇಳುತ್ತ, ಮೈದಾನದಿಂದ ಹೊರ ನಡೆದರು. ಜಿಲ್ಲಾ ಆಯುಷ್‌ ಅಧಿಕಾರಿ ಅವರ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಬಳಿಕ, ಸಂಸದರು ಬೇರೆ ಕಡೆ ನಡೆದ ಖಾಸಗಿ
ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ¨

Trending videos

Back to Top