CONNECT WITH US  

ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ: ಎಚ್‌.ಕೆ.ಪಾಟೀಲ್‌

ಗದಗ: ಸಚಿವ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಎಚ್‌.ಕೆ. ಪಾಟೀಲ, "ತಾವು ಪಕ್ಷದ
ಶಿಸ್ತಿನ ಸಿಪಾಯಿಯಾಗಿದ್ದು, ಹೈಕಮಾಂಡ್‌ ವಹಿಸುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧ' ಎಂದಿದ್ದಾರೆ. 

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಹಿರಿಯರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೊಂದಿರುವ ಅಭಿಪ್ರಾಯವನ್ನು ಇತ್ತೀಚೆಗೆ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಆ ಹಿನ್ನೆಲೆಯಲ್ಲಿ ಹೈಕಮಾಂಡ್‌ ಯಾವ ಜವಾಬ್ದಾರಿ ವಹಿಸಿದರೂ ನಿಭಾಯಿಸುತ್ತೇನೆ.

ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಬಜೆಟ್‌ ಮಂಡನೆ ಕುರಿತು ಕಾಂಗ್ರೆಸ್‌ ಶಾಸಕರಲ್ಲಿ ವ್ಯಕ್ತವಾಗುತ್ತಿರುವ ಭಿನ್ನ ಹೇಳಿಕೆಗಳ ಬಗ್ಗೆ ಯಾರೂ ಮಾಧ್ಯಮಗಳಿಗೆ ವೈಯಕ್ತಿಕ ಹೇಳಿಕೆ ನೀಡಬಾರದೆಂಬ ಸೂಚನೆಯಿದೆ. ಹೀಗಾಗಿ ಪಕ್ಷದ ಶಿಸ್ತಿನ ಕಾರ್ಯಕರ್ತನಾಗಿ ಪಾಲಿಸುತ್ತೇನೆ. ಸರ್ಕಾರದಲ್ಲಿ ಸಮನ್ವಯ ಮೂಡಿಸಲು ಸಮಿತಿ ಬರಲಿದೆ' ಎಂದರು.


Trending videos

Back to Top