CONNECT WITH US  

ಪರಿಹಾರಕ್ಕೆ ಹಣದ ಕೊರತೆ ಇಲ್ಲ: ಆರ್‌.ವಿ.ದೇಶಪಾಂಡೆ

ಕಾರವಾರ: ಪ್ರತಿ ಜಿಲ್ಲೆಯಲ್ಲಿ 5 ಕೋಟಿ ರೂ.ಪ್ರಕೃತಿ ವಿಕೋಪ ಪರಿಹಾರ ಮೊತ್ತವಿದೆ. ಪ್ರತಿ ತಾಲೂಕಿನಲ್ಲಿ
ತಹಶೀಲ್ದಾರರ ಬಳಿ ಕನಿಷ್ಠ 20 ಲಕ್ಷ ರೂ. ಪರಿಹಾರ ಮೊತ್ತ ಇದೆ. ಪ್ರಕೃತಿ ವಿಕೋಪ ಪರಿಹಾರ ಕೈಗೊಳ್ಳಲು ಯಾವುದೇ ಕೊರತೆಯಿಲ್ಲ ಎಂದು ಕಂದಾಯ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಸತಿ ಯೋಜನೆಯಡಿ ಪಡೆದ ಮನೆ ಪ್ರಕೃತಿ ವಿಕೋಪದಿಂದ ಸಂಪೂರ್ಣ ಹಾನಿಗೊಳಗಾಗಿದ್ದರೆ, ಅಂಥವರಿಗೆ ಹೊಸ ಮನೆ ನೀಡಲಾಗುವುದು. ಪ್ರಕೃತಿ ವಿಕೋಪದಿಂದ ಮನೆ ಸಂಪೂರ್ಣ ಹಾನಿಗೊಳಗಾಗಿದ್ದರೆ ಅವರನ್ನು ಮತ್ತೂಮ್ಮೆ ವಸತಿ ಸೌಲಭ್ಯ ವ್ಯಾಪ್ತಿಗೆ ತರಲಾಗುವುದು ಎಂದರು.


Trending videos

Back to Top