CONNECT WITH US  

ಪ್ರಕೃತಿ ವಿಕೋಪ: ಮನೆ ಕುಸಿದರೆ ಲಕ್ಷ ಪರಿಹಾರ

ವಿಧಾನಸಭೆ: ಪ್ರಕೃತಿ ವಿಕೋಪದಿಂದ ಮನೆಗಳು ಸಂಪೂರ್ಣ ಕುಸಿದರೆ ಮುಖ್ಯಮಂತ್ರಿಗಳ ಪರಿಹಾರ
ನಿಧಿಯಿಂದ ಒಂದು ಲಕ್ಷ ರೂ. ಪರಿಹಾರ ಒದಗಿಸಲು ಈಗಾಗಲೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಶೂನ್ಯ ವೇಳೆಯಲ್ಲಿ ಸೋಮವಾರ ಮಳೆಯಿಂದ ಮನೆ ಪೂರ್ಣ ಕುಸಿದರೆ ಸರ್ಕಾರದಿಂದ 95 ಸಾವಿರ ರೂ. ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಂದು ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದಾಗ ಮಧ್ಯ ಪ್ರವೇಶಿಸಿದ ಜೆ.ಸಿ.ಮಾಧುಸ್ವಾಮಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಹಣ ಇಲ್ಲದೇ ಇದ್ದರೆ ಏನು ಮಾಡುವುದು? ಕೆಲವರಿಗೆ ಪರಿಹಾರ ಕೊಟ್ಟು ಇನ್ನು ಕೆಲವರಿಗೆ ಪರಿಹಾರ ನೀಡದಿದ್ದರೆ ತಾರತಮ್ಯ ಮಾಡಲಾಗುತ್ತಿದೆ ಎಂಬ
ಆರೋಪ ಬರಬಹುದು. 

ಆದ್ದರಿಂದ ಈ ಕುರಿತು ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂದು ಸಲಹೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಈಗಾಗಲೇ ಈ ಕುರಿತು ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

Trending videos

Back to Top