CONNECT WITH US  

21ರಂದು ಸಂಸದರ ಮನೆ ಎದುರು ಸತ್ಯಾಗ್ರಹ: ಮಾತೆ

ಕೂಡಲಸಂಗಮ: ರಾಷ್ಟ್ರೀಯ ಬಸವ ದಳ ಹಾಗೂ ಇನ್ನಿತರ ಬಸವ ತತ್ವಪರ ಸಂಘಟನೆಗಳು ಸೇರಿಕೊಂಡು ಜು.21ರಂದು ರಾಜ್ಯಾದ್ಯಂತ ರಾಜ್ಯ ಸಂಸದರ ಮನೆ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಿ, ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನಕ್ಕಾಗಿ ಶಿಫಾರಸನ್ನು ಕೇಂದ್ರ ಸರ್ಕಾರದ ಅನುಮತಿಗೆ ಕಳಿಸಿಕೊಡಲಾಗಿತ್ತು. ಆದರೆ, ಈವರೆಗೂ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.

ಕರ್ನಾಟಕದಿಂದ ಆಯ್ಕೆಯಾಗಿ ಹೋಗಿರುವ ಸಂಸತ್‌ ಸದಸ್ಯರು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕಾಗಿರುವುದು ಅವರ ಕರ್ತವ್ಯ. ಹೀಗಾಗಿ, ಜು.21ರಂದು ರಾಜ್ಯ ಸರ್ಕಾರದ ಶಿಫಾರಸನ್ನು ಮಾನ್ಯ ಮಾಡುವಂತೆ ಆಗ್ರಹಿಸಿ,ಕೇಂದ್ರ ಸರ್ಕಾರದ ನಿರ್ಲಕ್ಷé ಖಂಡಿಸಿ ರಾಜ್ಯಾದ್ಯಂತ ರಾಷ್ಟ್ರೀಯ ಬಸವ ದಳ ಹಾಗೂ ಇನ್ನಿತರ ಬಸವ ತತ್ವಪರ ಸಂಘಟನೆಗಳು ಸೇರಿ ಸಂಸದರ ಮನೆ ಮುಂದೆ ಶಾಂತಿಯುತವಾಗಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ತಿಳಿಸಿದ್ದಾರೆ.


Trending videos

Back to Top