ಕ್ಲಬ್‌ ಲಾಕರ್‌ನಲ್ಲಿ ರಹಸ್ಯ ಸಂಪತ್ತು ಪತ್ತೆ


Team Udayavani, Jul 22, 2018, 6:00 AM IST

bowring.jpg

ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಕ್ಲಬ್‌ನ ಲಾಕರ್‌ಗಳಲ್ಲಿ ಉದ್ಯಮಿಯೊಬ್ಬರು ಅನಧಿಕೃತವಾಗಿ ರಹಸ್ಯವಾಗಿ ಕೋಟಿ ಕೋಟಿ ರೂ.ಹಣ, ವಜ್ರ, ಚಿನ್ನಾಭರಣ, ನೂರಾರು ಕೋಟಿ ರೂ.ಮೌಲ್ಯದ ಆಸ್ತಿಪತ್ರಗಳನ್ನು ಬಚ್ಚಿಟ್ಟಿದ್ದ ಸ್ಫೋಟಕ ಸಂಗತಿ ಬಯಲಾಗಿದೆ.

ಹಲವು ವರ್ಷಗಳಿಂದ ಕ್ಲಬ್‌ನ ಮೂರು ಲಾಕರ್‌ಗಳಿಂದ ಕಾನೂನು ಬಾಹಿರವಾಗಿ ಹಣ, ಆಭರಣ,ಆಸ್ತಿ ದಾಖಲೆಗಳನ್ನು ಬಚ್ಚಿಟ್ಟು ಯಾಮಾರಿಸಿದ್ದ ನಗರದ ರಿಯಲ್‌ ಎಸ್ಟೇಟ್‌ ಉದ್ಯಮಿ ಅವಿನಾಶ್‌ ಅಮರ್‌ಲಾಲ್‌ ಕುಕ್ರೇಜಾ ಇದೀಗ ತಾನೇ ಆದಾಯ ತೆರಿಗೆ ಇಲಾಖೆ ಬಲೆಗೆ ಬಿದ್ದಿದ್ದಾರೆ.

ಬೌರಿಂಗ್‌ ಕ್ಲಬ್‌ನ ಲಾಕರ್‌ಗಳಲ್ಲಿ ಅವಿನಾಶ್‌ ಬಚ್ಚಿಟ್ಟಿದ್ದ 3.90 ಕೋಟಿ ರೂ.ನಗದು, 7.8 ಕೋಟಿ ರೂ.ಮೌಲ್ಯದ ವಜ್ರದ ಆಭರಣಗಳು, 650 ಗ್ರಾಂ ತೂಕದ ಚಿನ್ನದ ಬಿಸ್ಕೆಟ್‌ಗಳು, ದುಬಾರಿ ಮೌಲ್ಯದ ರೋಲೆಕ್ಸ್‌ ಹಾಗೂ ವೆಗೂ ಕಂಪನಿಯ ಒಂದೊಂದು ವಾಚ್‌, ಸುಮಾರು 550 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಪತ್ರ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ರಹಸ್ಯ ಕುಬೇರ ಅವಿನಾಶ್‌ ಹಿನ್ನೆಲೆ ಹಾಗೂ ಆತನ ಆದಾಯ ಮೂಲ ಬೇಧಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಬೆನ್ನಲ್ಲೆ ಶನಿವಾರ ಜಪ್ತಿಯಾಗಿರುವ ಹಣ ಆಸ್ತಿ ದಾಖಲೆಗಳ ಬಗ್ಗೆ ಅವಿನಾಶ್‌ರನ್ನು ವಿಚಾರಣೆಗೊಳಪಡಿಸಿರುವ ಐಟಿ ಅಧಿಕಾರಿಗಳು ಜುಲೈ 23ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ಅಚ್ಚರಿಯ ಸಂಗತಿ ಎಂದರೆ, ಲಾಕರ್‌ನಲ್ಲಿ ಹಣ, ವಜ್ರಾಭರಣ ಹಾಗೂ ಆಸ್ತಿ ದಾಖಲೆ ಇರುವುದು ಕ್ಲಬ್‌ ಆಡಳಿತ ಮಂಡಳಿಗೆ ಗೊತ್ತಾದ ನಂತರ ಅವಿನಾಶ್‌, ಹಣ ಮತ್ತು ವಜ್ರಾಭರಣಗಳನ್ನು ನೀವೇ ಇಟ್ಟುಕೊಂಡು ಆಸ್ತಿ ದಾಖಲೆ ಮಾತ್ರ ಕೊಡಿ ಎಂದು ದುಂಬಾಲು ಬಿದ್ದಿದ್ದ. ಇದಲ್ಲದೆ ಮತ್ತೂಬ್ಬಮಧ್ಯವರ್ತಿ ಒಂದೇ ಒಂದು ದಾಖಲೆಗೆ ಐದು ಕೋಟಿ ರೂ.ನೀಡುವ ಆಫ‌ರ್‌ನ್ನು ಸಹ ಕ್ಲಬ್‌ನ ಆಡಳಿತ ಮಂಡಳಿಗೆ ನೀಡಿದ್ದ ಎಂಬುದು ಬಹಿರಂಗಗೊಂಡಿದೆ.

ಈ ಬೆಳವಣಿಗೆಗಳ ನಡುವೆಯೇ, ನಂಜಪ್ಪ ಸರ್ಕಲ್‌ ಸಮೀಪದಲ್ಲಿರುವ ಅವಿನಾಶ್‌ ಮನೆ, ಆತ ಹಾಗೂ ಆತನ ಕುಟುಂಬಸ್ಥರು ನಡೆಸುವ ಉದ್ಯಮ ಗಳ ಕಚೇರಿಗಳು, ಆತನ ಸದಸ್ಯತ್ವ ಹೊಂದಿದ್ದ ಬೆಂಗಳೂರು ಕ್ಲಬ್‌ ಸೇರಿ ಇನ್ನಿತರ ಕ್ಲಬ್‌ಗಳಲ್ಲಿಯೂ ಕಾರ್ಯಾಚರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಜತೆಗೆ, ಲಾಕರ್‌ನಲ್ಲಿ ದೊರೆತ ನೂರಾರು ಕೋಟಿ ರೂ. ಮೌಲ್ಯದ ಆಸ್ತಿದಾಖಲೆ ಗಳು ಬಹುತೇಕ ದೇವನಹಳ್ಳಿ, ಬೇಗೂರು ಸುತ್ತಲ ಪ್ರದೇಶಗಳಿಗೆ ಸಂಬಂಧಿಸಿದ ಎಕರೆಗಟ್ಟಲೆ ಆಸ್ತಿ ದಾಖಲೆಗಳಾಗಿದ್ದು, ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪೆನಿಗಳಿಗೆ ಸೇರಿದ್ದು. ಗಣ್ಯವ್ಯಕ್ತಿಗಳಿಗೆ ನಂಟಿರುವ ಶಂಕೆ ಹಿನ್ನೆಲೆಯಲ್ಲಿ, ಆ ಆಸ್ತಿಗಳ ಮಾರುಕಟ್ಟೆ ಮೌಲ್ಯ, ಅಸಲಿ ವಾರಸುದಾರರು ಯಾರು ಎಂಬುದರ ಬಗ್ಗೆ ಐಟಿ ಪರಿಶೀಲನೆ ಮುಂದುವರಿದಿದೆ.

ಮತ್ತೂಂದೆಡೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ಘಟನಾ ಸ್ಥಳಕ್ಕೆ ತೆರಳಿ ಹಣ ಹಾಗೂ ಆಭರಣ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಐಟಿ ಅಧಿಕಾರಿಗಳ ತನಿಖೆ ಪೂರ್ಣಗೊಂಡ ಬಳಿಕ ಪ್ರತ್ಯೇಕ ತನಿಖೆ ನಡೆಸುವ ಸಾಧ್ಯತೆಯಿದೆ. ಲಾಕರ್‌ನಲ್ಲಿ ದೊರೆತ ಆಸ್ತಿದಾಖಲೆಗಳು, ಹಲವು ರಿಯಲ್‌ ಎಸ್ಟೇಟ್‌ ಕಂಪೆನಿಗಳು ಹಾಗೂ ಪ್ರಭಾವಿಗಳಿಗೆ ಕಂಟಕ ತಂದೊಡ್ಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ನಗರದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಫೈನಾನ್ಸ್‌ ಮಾಡುವ ಅವಿನಾಶ್‌, ನಂ.1 ಫೈನಾ ನ್ಸರ್‌ ಎಂಬ ಖ್ಯಾತಿ ಸಹ ಪಡೆದಿದ್ದು, ಅವರಿಗೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹಾಗೂ ರಾಜಕಾರಣಿ- ಗಣ್ಯರ ಸಂಪರ್ಕವಿದೆ ಎಂದು ಹೇಳಲಾಗುತ್ತಿದೆ. ಬ್ಯಾಂಕ್‌ ಅಥವಾ ಇನ್ನಿತರ ಕಡೆ ಹಣ, ಆಸ್ತಿ ದಾಖಲೆ ಗಳನ್ನು ಇಟ್ಟರೆ ಐಟಿಗೆ ಗೊತ್ತಾಗಲಿದೆ. ಹೀಗಾಗಿ, ಯಾರಿಗೂ ಅನುಮಾನ ಬರಬಾರದು ಎಂಬ ಉದ್ದೇಶದಿಂದ ಆಟಗಾರರು ಆಟದ ಸಾಮಾಗ್ರಿಗಳನ್ನು ಇಡುವ ಲಾಕರ್‌ಗಳನ್ನು ಅನಧಿಕೃತವಾಗಿ ಬಳಕೆ ಮಾಡಿ ಬಚ್ಚಿಟ್ಟಿದ್ದಾರೆ.
ಲಾಕರ್‌ನಲ್ಲಿ ಸಿಕ್ಕ ನೂರಾರು ಕೋಟಿ ರೂ. ಮೌಲ್ಯದ ದಾಖಲೆಗಳನ್ನು ಐಟಿ ಅಧಿ ಕಾರಿಗಳು,ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಕಾಟ ದಲ್ಲಿದ್ದು, ಇದೀಗ ಆ ಮಾಹಿತಿ ದೊರೆತಿದೆ. ಈ ಪ್ರಕರಣ ಮತ್ತೂಂದು ಮಗ್ಗುಲಿಗೆ ಹೊರಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಯಾರಿದು ಅವಿನಾಶ್‌?
ರಾಜಸ್ಥಾನ ಮೂಲದ ಅವಿನಾಶ್‌ ಅಮರಲಾಲ್‌, ದಶಕಗಳ ಹಿಂದೆಯೇ ಬೆಂಗಳೂರಿಗೆ ಬಂದು ಕುಟುಂಬದ ಜತೆ ವಾಸ ಮಾಡುತ್ತಿದ್ದಾರೆ. ಜೆ.ಪಿ. ಟೈರ್‌ ಮಾರಾಟ ಮಳಿಗೆ ಹೊಂದಿದ್ದಾರೆ. ಪ್ರಮುಖವಾಗಿ ರಿಯಲ್‌ ಎಸ್ಟೇಟ್‌ ಡೀಲರ್‌ ಹಾಗೂ ಹಣಕಾಸು ವ್ಯವಹಾರ ನಡೆಸುತ್ತಾರೆ ಎನ್ನಲಾಗುತ್ತಿದೆ. 1993ರಲ್ಲಿ ಕ್ಲಬ್‌ನ ಅಜೀವ ಸದಸ್ಯತ್ವ ಪಡೆದುಕೊಂಡಿರುವ ಅವಿನಾಶ್‌, ಆಗೊಮ್ಮೆ ಈಗೊಮ್ಮೆ ಕ್ಲಬ್‌ಗ ಆಗಮಿಸುತ್ತಿದ್ದರು. ಉಳಿದಂತೆ ಅವರ ತಾಯಿ ಕ್ಲಬ್‌ಗ ಯಾವಾಗಲೂ ಆಗಮಿಸುತ್ತಿದ್ದರು.

ಹಣದ ರಹಸ್ಯ ಬಯಲಾಗಿದ್ದು ಹೇಗೆ?
5187 ಸದಸ್ಯರನ್ನು ಹೊಂದಿರುವ ಕ್ಲಬ್‌ನಲ್ಲಿ ಲಾಕರ್‌ ವ್ಯವಸ್ಥೆ ನೀಡಲಾಗುತ್ತಿದ್ದು, 672 ಲಾಕರ್‌ಗಳಿವೆ. ಕಳೆದ ಎರಡು ವರ್ಷಗಳಿಂದ ಅನಧಿಕೃತವಾಗಿ ಕೆಲವರು ಲಾಕರ್‌ ಬಳಸುತ್ತಿರುವುದು ಗೊತ್ತಾಗಿತ್ತು. ಹೀಗಾಗಿ ಲಾಕರ್‌ ಬಳಕೆಗೆ ಅನುಮತಿ ಪಡೆದಿದ್ದ ಸದಸ್ಯರಿಗೆ ಲಾಕರ್‌ ಸಿಗುತ್ತಿರಲಿಲ್ಲ. ಪರಿಶೀಲನೆ ನಡೆಸಿದಾಗ ಒಟ್ಟು 127 ಲಾಕರ್‌ಗಳು ಅನಧಿಕೃತವಾಗಿ ಬಳಕೆಯಾಗುತ್ತಿರುವುದು ಗೊತ್ತಾಗಿತ್ತು. ಹೀಗಾಗಿ, ಎಲ್ಲ ಸದಸ್ಯರಿಗೂ ಅನಧಿಕೃತವಾಗಿ ಲಾಕರ್‌ ಬಳಸುತ್ತಿದ್ದರೆ ತೆರವು ಮಾಡಿ ಎಂದು ನೋಟಿಸ್‌ ನೀಡಿ, ಸಂದೇಶಗಳನ್ನೂ ಕಳುಹಿಸಲಾಗಿತ್ತು. ಪ್ರತಿಕ್ರಿಯೆ ಬಾರದಿದ್ದಾಗ ಜು.17ರಿಂದ ಅನಧಿಕೃತವಾಗಿ ಬಳಕೆ ಮಾಡುತ್ತಿದ್ದ ಲಾಕರ್‌ಗಳ ಬೀಗವನ್ನು ಆಡಳಿತ ಮಂಡಳಿ ಸದಸ್ಯರ ನೇತೃತ್ವದಲ್ಲಿಯೇ ಒಡೆಯಲಾಯಿತು. ಆಗ ಹಣದ ರಹಸ್ಯ ಬಯಲಾಯಿತು.

ಟಾಪ್ ನ್ಯೂಸ್

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.