CONNECT WITH US  

ಆಂಜನೇಯ ದೇಗುಲ ಇಂದು ಸ್ವಾಧೀನ

ಗಂಗಾವತಿ: ಐತಿಹಾಸಿಕ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದಲ್ಲಿರುವ ಶ್ರೀ ಆಂಜನೇಯ ದೇವಾಲಯವನ್ನು ಸರಕಾರ ತನ್ನ ವಶಕ್ಕೆ ಪಡೆದಿದ್ದು, ಆಡಳಿತಾಧಿಕಾರಿ ಚಂದ್ರಮೌಳಿ ಹಾಗೂ ತಹಶೀಲ್ದಾರ್‌ ಎಲ್‌.ಡಿ. ಚಂದ್ರಕಾಂತ ಸೇರಿ ಕಂದಾಯ ಇಲಾಖೆಯ ಅಧಿಕಾರಿಗಳು ಜು.23ರಂದು ಬೆಟ್ಟಕ್ಕೆ ತೆರಳಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಮಹಾಂತ ವಿದ್ಯಾದಾಸ ಬಾಬಾ ಅವರನ್ನು ದೇವಾಲಯದ ಟ್ರಸ್ಟ್‌ ಕಮಿಟಿ ಪದಚ್ಯುತಿಗೊಳಿಸಿದ ನಂತರ ಸ್ಥಳೀಯ ಅರ್ಚಕರೇ ಪೂಜಾ ಕಾರ್ಯ, ಧಾರ್ಮಿಕ ಕಾರ್ಯ ಕೈಗೊಳ್ಳುತ್ತಿದ್ದರು. ಬಾಬಾ ಬೆಂಗಲಿಗರು ಮತ್ತು ಅಂಜನಿ ಪರ್ವತ ಟ್ರಸ್ಟ್‌ ಕಮಿಟಿ ನಡುವೆ ಆಗಾಗ ಸಂಘರ್ಷ ನಡೆದು ಕಾನೂನು ಸುವ್ಯಸ್ಥೆ ಹದಗೆಟ್ಟ ಪರಿಣಾಮ ಪೊಲೀಸ್‌ ಹಾಗೂ ಕಂದಾಯ ಇಲಾಖೆಯ ಪತ್ರಗಳನ್ನಾಧರಿಸಿ ಜಿಲ್ಲಾಧಿಕಾರಿ ಸರಕಾರದ ವಶಕ್ಕೆ ಪಡೆದಿದ್ದಾರೆ.

ಈ ಹಿಂದೆ ಅರ್ಚಕರಾಗಿದ್ದ ತುಳಸಿದಾಸ ಬಾಬಾ ಅಕ್ರಮ ಕಾರ್ಯವೆಸಗುತ್ತಿದ್ದಾರೆ ಎಂಬ ಕಾರಣಕ್ಕಾಗಿ ಟ್ರಸ್ಟ್‌ 10 ವರ್ಷಗಳ ಹಿಂದೆ ಮಹಾಂತ ವಿದ್ಯಾದಾಸ ಬಾಬಾ ಅವರನ್ನು ಅರ್ಚಕರನ್ನಾಗಿ ನೇಮಿಸಿತ್ತು. ಹಲವು ವಿಷಯಗಳಲ್ಲಿ ಟ್ರಸ್ಟ್‌ ಹಾಗೂ ಬಾಬಾ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ಬಾಬಾ ಅವರು ರಾಜಮನೆತನ ನೇತೃತ್ವದ ಟ್ರಸ್ಟ್‌ನ್ನು ನಿರ್ಲಕ್ಷÂ ಮಾಡಿದ್ದರಿಂದ ಸಂಘರ್ಷ ಉಂಟಾಗಿತ್ತು. ಬಾಬಾಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರಿಂದ ಟ್ರಸ್ಟ್‌ನ ಕಮೀಟಿ ಪೊಲೀಸ್‌ ನೆರವಿನಿಂದ ಅವರನ್ನು ಬೆಟ್ಟದಿಂದ ಕೆಳಗಿಳಿಸಿದ್ದರು. ಬಾಬಾ ಅವರನ್ನು ಬೆಂಬಲಿಗರು ಪುನಃ ಸಂಸ್ಕೃತ ಪಾಠಶಾಲೆಯಲ್ಲಿ ಉಳಿಸಿದ್ದರು. ಎರಡು ಬಾರಿ ಬಾಬಾ ಬೆಂಬಲಿಗರು ಮತ್ತು ಟ್ರಸ್ಟ್‌ ಪದಾಧಿಕಾರಿಗಳ ನಡುವೆ ಸಂಧಾನ ಸಭೆ ಜರುಗಿದರೂ ಸಮಸ್ಯೆ ಬಗೆಹರಿದಿರಲಿಲ್ಲ. ಸಂಘರ್ಷದಿಂದ ಕಾನೂನು ಸುವ್ಯವಸ್ಥೆಗೆ ಭಂಗ ಬರುವ ಹಿನ್ನೆಲೆಯಲ್ಲಿ ದೇವಾಲಯವನ್ನುಸರಕಾರದ ಸುಪರ್ದಿಗೆ ಪಡೆಯುವಂತೆ ವರದಿ ಆಧರಿಸಿ ಜಿಲ್ಲಾಧಿಕಾರಿಗಳು ಸರಕಾರದ ವಶಕ್ಕೆ ಪಡೆದಿದ್ದಾರೆ.

ಅಂಜನಾದ್ರಿ ಬೆಟ್ಟದಲ್ಲಿ ನಿರಂತರ ದಾಸೋಹ ಮತ್ತು ಪೂಜಾ ಕಾರ್ಯ ಕೈಗೊಳ್ಳಲು ಸರಕಾರದ ಅಧೀನದಲ್ಲಿ ಟ್ರಸ್ಟ್‌ ರಚಿಸಿ ಭಕ್ತರು ನೀಡುವ ದೇಣಿಗೆಯಲ್ಲಿ ದಾಸೋಹ ಸೇರಿ ಮೂಲಸೌಕರ್ಯ ಕಲ್ಪಿಸಲು ಸೂಕ್ತ ನಿಯಮ ರೂಪಿಸಬೇಕು.
- ತಿಪ್ಪೇರುದ್ರಸ್ವಾಮಿ, ಅಂಜನಾದ್ರಿಬೆಟ್ಟದ ಭಕ್ತರು


Trending videos

Back to Top