CONNECT WITH US  

ಸ್ಮಶಾನದಲ್ಲಿ ಉಪಾಹಾರ ಸೇವಿಸಿದ ಸತೀಶ

ಬೆಳಗಾವಿ: ಹಣ್ಣು ಹಂಪಲಗಳ ಉಪಯೋಗ ನಮಗೆ ಗೊತ್ತಾಗಬೇಕಿದೆ. ಕೆಲವು ದಿನಗಳ ಹಿಂದೆ ಜಡ್ಡಿಯಲ್ಲಿ ಸತ್ಕಾರ ಮಾಡುವಾಗ ನಿಂಬೆಹಣ್ಣು ಕೊಟ್ಟಿದ್ದರು. ಅದಕ್ಕೆ ಮಾಧ್ಯಮದಲ್ಲಿ ಬೇರೆ ಅರ್ಥ ನೀಡಲಾಯಿತು. ನಿಂಬೆ ಹಣ್ಣಿನ ವಾಸನೆ ತೆಗೆದುಕೊಳ್ಳುವಾಗ ಅಪಾರ್ಥ ಕಲ್ಪಿಸಲಾಗಿದೆ ಎಂದು ಸತೀಶ ಜಾರಕಿಹೊಳಿ ಸ್ಪಷ್ಟನೆ ನೀಡಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಚಂದ್ರಗ್ರಹಣ ನಿಮಿತ್ತ ಶುಕ್ರವಾರ ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ನಡೆದ ಮೌಡ್ಯ ವಿರೋಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪಾಹಾರ ಸವಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರದ ಹಿಂದೆ ನಿಂಬೆಹಣ್ಣು ಕೈಯಲ್ಲಿ ಹಿಡಿದುಕೊಂಡಿದ್ದ ಬಗ್ಗೆ ಸುದ್ದಿ ಪ್ರಕಟವಾಗಿರುವ ಕುರಿತು ಹಾಸ್ಯಭರಿತವಾಗಿಯೇ ಸ್ಪಷ್ಟೀಕರಣ ನೀಡಿದರು. ನಿಂಬೆ ಹಣ್ಣಿನಲ್ಲಿ ಔಷಧೀಯ ಗುಣ ಇದೆ. ಗ್ಯಾಸ್ಟ್ರಿಕ್‌ ಹಾಗೂ ದೇಹದ ತೂಕ ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ. ವಾಹನದಲ್ಲಿದ್ದ ಲಿಂಬೆಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ವಾಸನೆ ನೋಡುವಾಗ ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿದೆ ಎಂದು ಹೇಳಿ ಹಾಸ್ಯ ಚಟಾಕಿ ಹಾರಿಸಿದರು.

Trending videos

Back to Top