CONNECT WITH US  

ಆಪರೇಷನ್‌ ಕಮಲಕ್ಕೆ ಯತ್ನ;5 ಜನರಿಗೆ ಬೇರೆ ಕೆಲ್ಸ ಇಲ್ಲ: ಸಚಿವ ಡಿಕೆಶಿ

ಬೆಂಗಳೂರು: ಬಿಜೆಪಿಯವರು ನಮ್ಮ ಪಕ್ಷದ ಶಾಸಕರನ್ನು ಸೆಳೆಯುವ ಪ್ರಯತ್ನ ಮುಂದುವರಿಸಿದ್ದು,ಯಾರು ಆ ಕಾರ್ಯ ಮಾಡುತ್ತಿದ್ದಾರೆ ಎಂದು ಬಹಿರಂಗ ಪಡಿಸುವುದಾಗಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಮಂಗಳವಾರ ಹೇಳಿಕೆ ನೀಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾರು ಯಾರು ಯಾರ ಯಾರ ಹತ್ತಿರ ಮಾತಾಡಿದ್ದಾರೆ. ಏನೇನು ಮಾತನಾಡಿದ್ದಾರೆ ಎನ್ನುವುದು ಗೊತ್ತು. ಬಿಜೆಪಿಯ 5 ಮಂದಿಗೆ ಬೇರೆ ಕೆಲಸವೇ ಇಲ್ಲ. ಅವರು ನಮ್ಮ ಪಕ್ಷದವರನ್ನು ಟಚ್‌ ಮಾಡಿ ಮಾತುಕತೆ ಆಡುತ್ತಿದ್ದಾರೆ,ಆಮಿಷ ಒಡ್ಡಿದ್ದಾರೆ ಎಂದರು. 

ಯಾರ ಹತ್ತಿರ ಮಾತನಾಡಿದ್ದಾರೆ ಎನ್ನುವುದನ್ನು ಈಗ ಹೇಳುವುದಿಲ್ಲ ಸೂಕ್ತ ಕಾಲ ಬಂದಾಗ ಮಾತನಾಡಿದವರ ಮೂಲಕವೇ ಬಹಿರಂಗ ಪಡಿಸುವುದಾಗಿ ತಿಳಿಸಿದರು. 


Trending videos

Back to Top