CONNECT WITH US  

ಗೌರಿ ಹತ್ಯೆ ಪ್ರಕರಣ: ಬೆಳಗಾವಿ ಧಾಬಾ ಮಾಲೀಕನ ವಿಚಾರಣೆ

ಬೆಳಗಾವಿ: ಗೌರಿ ಹತ್ಯೆ ಪ್ರಕರಣದೊಂದಿಗೆ ಬೆಳಗಾವಿಯ ನಂಟು ದಿನದಿನಕ್ಕೂ ಬೆಳೆಯುತ್ತಿದೆ. ನಗರದಲ್ಲಿ ಬೀಡು ಬಿಟ್ಟಿರುವ ಎಸ್‌ಐಟಿ ತಂಡ ಸಂಘಟನೆಯೊಂದರ ಕಾರ್ಯಕರ್ತನನ್ನು ವಶಕ್ಕೆ ಪಡೆದಿದೆ. ಇನ್ನೋರ್ವ ಯುವಕನ ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ.

ನಗರದ ಮಹಾದ್ವಾರ ರಸ್ತೆಯ ಸಂಭಾಜಿ ಗಲ್ಲಿಯ ಭರತ್‌ ಎಂಬ ಧಾಬಾ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಬಂಧಿತ ವಿಜಯಪುರದ ಪರುಶರಾಮ ವಾಗೊ¾àರೆಗೆ ಉಳಿದುಕೊಳ್ಳಲು ಆಶ್ರಯ ನೀಡಿದ್ದನೆಂಬ ಆರೋಪದ ಮೇಲೆ ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಮಂಗಳವಾರ ರಾತ್ರಿ ಕಪಿಲೇಶ್ವರ ಕಾಲೋನಿಯ ಇನ್ನೋರ್ವ ಯುವಕನನ್ನು ಎಸ್‌ಐಟಿ ತಂಡ ವಶಕ್ಕೆ ಪಡೆದುಕೊಂಡಿತ್ತು. ಪ್ರಕರಣದಲ್ಲಿ ಯುವಕನ ಪಾತ್ರವಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಯುವಕನನ್ನು ಮನೆಗೆ ವಾಪಸ್‌ ಕಳುಹಿಸಿದ್ದಾರೆ.

ಅಮೋಲ್‌ ಕಾಳೆ ಹಾಗೂ ಪರಶುರಾಮ ವಾಗೊ¾àರೆ ಅವರ ವಿಚಾರಣೆ ಸಂದರ್ಭದಲ್ಲಿ ಧಾಬಾ ಮಾಲೀಕನ ಬಗ್ಗೆ ವಿವರ ತಿಳಿದುಬಂದಿದೆ. ಎಸ್‌ಐಟಿ ವಿಚಾರಣೆಗೆ ಯುವಕ ಖುದ್ದಾಗಿ ಹಾಜರಾಗಿ ಪ್ರಶ್ನೆಗಳಿಗೆ ಉತ್ತರಿಸಿದ್ದಾನೆಂದು ಮೂಲಗಳು ತಿಳಿಸಿವೆ. ನಂತರ ಆತನನ್ನು ಎಸ್‌ಐಟಿ ತಂಡ  ಬೇರೆಡೆ ಕರೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.

ಧಾಬಾಕ್ಕೆ ಬಂದು ಊಟ ಮಾಡಿದ್ರು: ಅಮೋಲ್‌ ಕಾಳೆ ಹಾಗೂ ವಾಗೊ¾àರೆ ಧರ್ಮ ಪ್ರಚಾರಕರಾಗಿ ಬೆಳಗಾವಿಗೆ ಬರುತ್ತಿದ್ದರೆಂದು ಎಸ್‌ಐಟಿ ಎದುರು ಧಾಬಾ ಮಾಲೀಕ ಮಾಹಿತಿ ನೀಡಿದ್ದಾನೆ. ಧರ್ಮ ಪ್ರಚಾರಕರು ಎಂಬ ಕಾರಣಕ್ಕಾಗಿ ಅವರಿಬ್ಬರಿಗೂ ಆಶ್ರಯ ನೀಡಿದ್ದೆ. ಉಳಿದಂತೆ ಯಾವುದೇ ಸಂಬಂಧ ಅವರೊಂದಿಗೆ ಹೊಂದಿರಲಿಲ್ಲವೆಂದು ತಿಳಿಸಿದ್ದಾನೆ ಎನ್ನಲಾಗಿದೆ. ಈಗಾಗಲೇ 2-3 ಬಾರಿ ಖಾನಾಪುರದಲ್ಲಿ  ಆರೋಪಿಗಳ ಮೂಲ ಪತ್ತೆ ಹಚ್ಚಿದ್ದ ಎಸ್‌ಐಟಿ ತಂಡ ಬುಧವಾರ ಮತ್ತೆ ಖಾನಾಪುರಕ್ಕೆ ದೌಡಾಯಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ನಾಲ್ವರು ಎಸ್‌ಐಟಿಗೆ ಬೇಕಾಗಿದ್ದು, ನಾಪತ್ತೆಯಾಗಿರುವವರ  ಶೋಧ ಕಾರ್ಯ ಮುಂದುವರಿದಿದೆ.


Trending videos

Back to Top