CONNECT WITH US  

ಎಚ್‌ಡಿಕೆ ಭತ್ತ ನಾಟಿ ಹಾಸ್ಯಾಸ್ಪದ: ಬಿಎಸ್‌ವೈ

ಬಳ್ಳಾರಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭತ್ತ ನಾಟಿ ಮಾಡಲು ಹೋಗಿದ್ದೇ ಒಂದು ಹಾಸ್ಯಾಸ್ಪದ. ಅದು ಕೇವಲ ಒಂದು ರೀತಿಯ ಶೋ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವ್ಯಂಗ್ಯವಾಡಿದರು. 

ನಗರದ ಸರ್ಕಾರಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ರೈತರೊಂದಿಗೆ ಭತ್ತದ ಸಸಿ ನಾಟಿ ಮಾಡಿದ್ದಾರೆ. ಮುಖ್ಯಮಂತ್ರಿ ಭತ್ತ ನಾಟಿ ಮಾಡಿದರೆಂದು ಪ್ರಚಾರ ತೆಗೆದುಕೊಳ್ಳಲು ಇದನ್ನು ಮಾಡಿದ್ದಾರೆ. ಇದೊಂದು ಹಾಸ್ಯಾಸ್ಪದ ಸಂಗತಿ. ಕೆಲ ಗಂಟೆಗಳ ಕಾಲ ಗದ್ದೆಗಿಳಿದು ಸಸಿ ನಾಟಿ ಮಾಡೋದನ್ನು ಕಂಡು ರಾಜ್ಯದ ಜನರು ಆನಂದಿಸಿದ್ದಾರೆ ಎಂದು ಕುಹಕವಾಡಿದರು.


Trending videos

Back to Top