CONNECT WITH US  

ಹವಾಮಾನ ವೈಪರೀತ್ಯ: ಸಿಎಂರಿಂದ ಬಾಗಿನ ರದ್ದು

ಬಾಗಲಕೋಟೆ: ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್‌ ಸೇವೆ ರದ್ದಾಗಿದೆ. ಹೀಗಾಗಿ, ಮುಖ್ಯಮಂತ್ರಿ ಕುಮಾರಸ್ವಾಮಿ ಆಲಮಟ್ಟಿಗೆ ಬಂದು ಕೃಷ್ಣೆಯ ಜಲ ಸನ್ನಿಧಿಗೆ ಬಾಗಿನ ಅರ್ಪಿಸಲು ಆಗಲಿಲ್ಲ. ಮುಂದಿನ ತಿಂಗಳು ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ತಿಳಿಸಿದರು. 

ಆಲಮಟ್ಟಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಯವರು ಆಲಮಟ್ಟಿಗೆ ಬಂದು ಬಾಗಿನ ಅರ್ಪಿಸಲು ಚುನಾವಣಾ ಆಯೋಗದಿಂದ ವಿಶೇಷ ಅನುಮತಿ ಪಡೆದಿದ್ದರು. ಚುನಾವಣೆ ನೀತಿ ಸಂಹಿತೆ ಇದ್ದರೂ ಈಗಾಗಲೇ ಕಾವೇರಿಗೆ ಬಾಗಿನ ಅರ್ಪಿಸಿದ್ದು, ಕೃಷ್ಣೆಗೂ ಅರ್ಪಿಸುತ್ತೇನೆಂದು ಅವರೇ ದಿನ ನಿಗದಿ ಮಾಡಿದ್ದರು. ಆದರೆ, ಅನಿವಾರ್ಯ ಕಾರಣಗಳಿಂದ ಮುಂದೂಡಬೇಕಾಗಿದೆ. ಕೃಷ್ಣೆಗೆ ಬಾಗಿನ ಅರ್ಪಿಸುವ ವಿಷಯದಲ್ಲಿ ತಾರತಮ್ಯ, ನಿರ್ಲಕ್ಷé ಎಂದು ಯಾರೂ ಭಾವಿಸಬಾರದು. ಸೆಪ್ಟೆಂಬರ್‌ನಲ್ಲಿ ಎಂತಹುದೇ ಪರಿಸ್ಥಿತಿ ಇದ್ದರೂ ಬಾಗಿನ ಅರ್ಪಣೆ ಕಾರ್ಯಕ್ರಮ ಮಾಡುತ್ತೇವೆ ಎಂದರು.

Trending videos

Back to Top