CONNECT WITH US  

ಬೈಕ್‌ಗೆ ಲಾರಿ ಡಿಕ್ಕಿ: ಇಬ್ಬರ ದೇಹ ಛಿದ್ರ

ಮಂಡ್ಯ: ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟಿರುವ ಘಟನೆ ನಗರದ ವಿ.ಸಿ.ಫಾರಂ ಗೇಟ್‌ನಲ್ಲಿ ಭಾನುವಾರ ಬೆಳಗ್ಗೆ 6.30ರ ಸಮಯದಲ್ಲಿ ಸಂಭವಿಸಿದೆ.

ತಾಲೂಕಿನ ಹೊಳಲು ಗ್ರಾಮದ ಪ್ರಮೋದ್‌ (23) ಹಾಗೂ ಎಚ್‌.ಮಲ್ಲಿಗೆರೆ ಪ್ರಶಾಂತ್‌ (22) ಮೃತರು. ಹೊಳಲು ಗ್ರಾಮದಿಂದ ಕಾಳೇನಹಳ್ಳಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ವಿ.ಸಿ.ಫಾರಂ ಗೇಟ್‌ ಕ್ರಾಸ್‌ ಮಾಡಲೆಂದು ನಿಂತಿದ್ದಾಗ, ಮಂಡ್ಯದಿಂದ ಮೈಸೂರಿಗೆ ತೆರಳುತ್ತಿದ್ದ ಲಾರಿಯು ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಇಬ್ಬರು ಟೈಯರ್‌ನ ಹಿಂಬದಿ ಸಿಲುಕಿ ಮೃತಪಟ್ಟರು.

ಲಾರಿಯು 20 ಚಕ್ರದಾದ್ದರಿಂದ ಇವರಿಬ್ಬರನ್ನು ಸುಮಾರು 100 ಮೀಟರ್‌ವರೆಗೆ ಎಳೆದೊಯ್ದಿದ್ದು, ದೇಹ ಛಿದ್ರ ಛಿದ್ರವಾಗಿದ್ದವು. ಲಾರಿ ಚಾಲಕ ಆಂಧ್ರ ಮೂಲದ ಮೋಹನ್‌ ಪರಾರಿಯಾಗಲು ಯತ್ನಿಸಿದನಾದರೂ ಸ್ಥಳೀಯರು ಆತನನ್ನು ಹಿಡಿದು, ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top