CONNECT WITH US  

ಧ್ವಜ ಕೆಳಗಿಳಿದಾಗ ಹಾಡಿದರು ರಾಷ್ಟ್ರಗೀತೆ...

ಬೆಳಗಾವಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ 72ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಬೆಳಗ್ಗೆ 9 ಗಂಟೆ ಸುಮಾರಿಗೆ ಧ್ವಜಾರೋಹಣ ನಡೆಸುವಾಗ ಧ್ವಜ ಹಾರಲೇ ಇಲ್ಲ.

ಸಚಿವರು ಮೂರ್‍ನಾಲ್ಕು ಬಾರಿ ಹಗ್ಗ ಎಳೆದರೂ ಧ್ವಜ ಹಾರಲಿಲ್ಲ. ಆಗ,ಅಲ್ಲಿಯೇ ಇದ್ದ ಪೊಲೀಸ್‌ ಸಿಬ್ಬಂದಿ ಧ್ವಜವನ್ನು ಕೆಳಗೆ ಜಗ್ಗಿದರು. ಮಧ್ಯ ಪ್ರವೇಶಿಸಿದ ಎಸ್‌ಪಿ ಸುಧೀರಕುಮಾರ ರೆಡ್ಡಿ ಅವರು,ಧ್ವಜಕ್ಕೆ ಕಟ್ಟಿದ್ದ ಗಂಟು ಬಿಚ್ಚಿ ನಂತರ ಧ್ವಜವನ್ನು ಮೇಲೆ ಜಗ್ಗಿದರು. ಧ್ವಜ ಇನ್ನೂ ಹಾರುವ ಮುನ್ನವೇ ರಾಷ್ಟ್ರಗೀತೆ ಆರಂಭವಾಗಿತ್ತು. ಧ್ವಜ ಕೆಳಗೆ ಇಳಿಸಿದಾಗಲೂ ರಾಷ್ಟ್ರಗೀತೆ ನಡೆದೇ ಇತ್ತು. ನಂತರ, ಧ್ವಜದ ಗಂಟು ಬಿಚ್ಚಿದ ನಂತರ ಧ್ವಜಾರೋಹಣ ಮಾಡಲಾಯಿತು.

ಉಲ್ಟಾ ಧ್ವಜ ಹಾರಿಸಿದ ಸಚಿವ ರಾಜಶೇಖರ ಪಾಟೀಲ
ಯಾದಗಿರಿ:
ನಗರದ ಜಿಲ್ಲಾಡಳಿತದಿಂದ ಬುಧವಾರ ಆಯೋಜಿಸಲಾಗಿದ್ದ 72ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕೇಸರಿ ಬಣ್ಣ ಕೆಳಗಾಗಿದ್ದ ರಾಷ್ಟ್ರಧ್ವಜ ಆರೋಹಣ ಮಾಡಲಾಯಿತು. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಬ್ಬಂದಿಯ ಎಡವಟ್ಟಿನಿಂ ದಾಗಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ.ಪಾಟೀಲ ಅವರು ಆರೋಹಣ ಮಾಡಿದ ಧ್ವಜದ ಕೇಸರಿ ಬಣ್ಣ ಕೆಳಗಾಗಿಯೇ ಇತ್ತು. ಮೇಲೇರಿದ ಬಳಿಕ ಧ್ವಜವನ್ನು ಕೆಳಗಿಳಿಸಿ, ಮತ್ತೂಮ್ಮೆ ಹಾರಿಸಲಾಯಿತು.


Trending videos

Back to Top