CONNECT WITH US  

ಸಂವಿಧಾನ ಸುಟ್ಟ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹ 

ಚನ್ನಪಟ್ಟಣ: ದೆಹಲಿಯ ಜಂತರ್‌ಮಂತರ್‌ ಮೈದಾನದಲ್ಲಿ ಸಂವಿಧಾನದ ಪ್ರತಿಯನ್ನು ದಹಿಸಿದವರನ್ನು ಗಡಿಪಾರು ಹಾಗೂ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಆ.17ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು,  ತಾಲೂಕಿನ ಎಲ್ಲಾ ವರ್ಗದ ಯುವಕರು, ಚಿಂತಕರು, ಮುಖಂಡರು ಭಾಗವಹಿಸಬೇಕೆಂದು ದಲಿತ ಪರ ಸಂಘಟನೆಗಳ ಮುಖಂಡರು ಮನವಿ ಮಾಡಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮುಖಂಡರು, ಸಂಧಾನದ ಮೂಲಕ ಮೀಸಲಾತಿ ಪಡೆದು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಸದೃಢರಾಗಿರುವ ಎಲ್ಲಾ ಸಮುದಾಯದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.  

ಸಂವಿಧಾನ ಪ್ರತಿಯನ್ನ ಸುಟ್ಟ ಮನುವಾದಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪತ್ತೆ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. ಜಯಕಾಂತ್‌ ಚಾಲುಕ್ಯ, ವಕೀಲ ಕುಮಾರ್‌, ಮತ್ತೀಕೆರೆ ಹನುಮಂತಯ್ಯ, ವೆಂಕಟೇಶ್‌(ಶೇಠು) ಪಿ.ಜೆ.ಗೋಂದರಾಜು, ಭರತ್‌, ಸಿದ್ದರಾಮಯ್ಯ, ಪಾಪಣ್ಣ, ಕೆಂಗಲಯ್ಯ, ಬಿ.ಸಿ.ಶಿವಾನಂದ, ಕೋಟೆ ಶ್ರೀನಿವಾಸ್‌ ಇದ್ದರು.

Trending videos

Back to Top