CONNECT WITH US  

ಗ್ರಾಪಂ ಸದಸ್ಯೆಯರಿಬ್ಬರಿಗೆ ದಿಗ್ಬಂಧನ

ನೆಲಮಂಗಲ: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಬಾವಿಕೆರೆ ಗ್ರಾಮಕ್ಕೆ ಆಗಮಿಸಿದ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯೆಯರಿಬ್ಬರಿಗೆ ದಿಗ್ಬಂಧನ ಹಾಕಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಸಂಭವಿಸಿದೆ.

ಆ.15ರಂದು ಬೆಳ್ಳಗ್ಗೆ ತಾಲೂಕಿನ ಯಂಟಗಾನಹಳ್ಳಿ ಗ್ರಾಮಪಂಚಾಯತಿ ಬಾವಿಕೆರೆ ಗ್ರಾಮದ ಸದಸ್ಯೆ ಧನಲಕ್ಷ್ಮೀ ಹಾಗೂ ಶಾಂತಿನಗರದ ನಿವಾಸಿಯಾಗಿರುವ ನಳಿನಾ ಅವರುಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಬವಿಕೆರೆ ಗ್ರಾಮದ ಸರಕಾರಿ ಶಾಲೆಗೆ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸುತಿದ್ದಂತೆ ಆಕ್ರೋಶಗೊಂಡ ಗ್ರಾಮಸ್ಥರು ಏಕಾಏಕಿ ಸದಸ್ಯರನ್ನು ತೀರ್ವವಾಗಿ ತರಾಟೆಗೆ ತೆಗೆದುಕೊಂಡರಲ್ಲದೆ ಮಾನವ ಸರಪಳಿಯನ್ನು ನಿರ್ಮಿಸಿಕೊಂಡು ಗ್ರಾಮದಿಂದ ಹೊರಹೋಗದಂತೆ ದಿಗ್ಬಂದನೆ ಹಾಕಿ ಗ್ರಾಮದಲ್ಲಿ ಘೇರಾವ್‌ನಡೆಸಿದ್ದಾರೆ.

ರಸ್ತೆಸಮಸ್ಯೆ : ಬೆಂಗಳೂರು ಕುಣಿಗಲ್‌ ರಸ್ತೆಯಲ್ಲಿರುವ ಬಾವಿಕೆರೆಗ್ರಾಮದ ಕ್ರಾಸ್‌ನಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮದ ಮುಖ್ಯರಸ್ತೆಯನ್ನು ಕಳೆದ ಕೆಲತಿಂಗಳ ಹಿಂದೆ ಜಿಪಂ ಸದಸ್ಯರ ಅನುದಾನದಲ್ಲಿ 2.40 ಲಕ್ಷರೂಗಳ ವೆಚ್ಚದಲ್ಲಿ ಕಚ್ಚಾರಸ್ತೆಯನ್ನಾಗಿ ಅಭಿವೃದ್ದಿ ಪಡಿಸಲಾಗಿತ್ತು, ಆದರೆ ಇತ್ತೀಚೆಗೆ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ರಸ್ತೆಹಾಳಾಗಿ ಮಣ್ಣುಜಾರಿಕೆಯುಂಟಾಗಿದೆ,

ಇದರಿಂದಾಗಿ ಗ್ರಾಮಸ್ಥರು ಸೇರಿದಂತೆ ಗ್ರಾಮದಿಂದ ಪಟ್ಟಣ ಮತ್ತಿತರೆಡೆಗಳಿಗೆ ಶಾಲಾಕಾಲೇಜು ಮತ್ತು ಕೆಲಸಕಾರ್ಯಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ರಸ್ತೆಪಘಾತಗಳು ಎದುರಾಗಿದ್ದು ಕೆಲವರು ತೀರ್ವವಾಗಿ ಗಾಯಗೊಂಡಿದ್ದರು ಇದರಿಂದಾಗಿ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮಪಂಚಾಯತಿ ಸದಸ್ಯರು ಕಳಪೆ ಕಾಮಗಾರಿಯನ್ನು ಮಾಡಿಸಿದ್ದಾರೆ,

ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವಲ್ಲಿ ವಿಫ‌ಲರಾಗಿದ್ದಾರೆಂದು ಆರೋಪಿಸಿ ತೀರ್ವವಾಗಿ ತರಾಟೆಗೆ ತೆಗೆದುಕೊಂಡು ಘೆರಾವ್‌ ಹಾಕಿದ್ದಾರೆ. ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ನಾಗೇಶ್‌, ಪವನ್‌, ಸಿದ್ದರಾಜು, ಮಹಂತೇಶ್‌, ಮಂಜುನಾಥ್‌ನಾಯಕ್‌, ಗಂಗರಾಜು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.


Trending videos

Back to Top