CONNECT WITH US  

ಕುಟುಂಬದ ಎಲ್ಲರ ಸಾಲಮನ್ನಾ: ಸಚಿವ

ಬೆಂಗಳೂರು: ಪ್ರತ್ಯೇಕ ಪಹಣಿ ನೀಡಿ ರೈತರ ಕುಟುಂಬದಲ್ಲಿ ಎಷ್ಟೇ ಜನ ಕೃಷಿ ಸಾಲ ಮಾಡಿದ್ದರೂ ಒಂದು ಲಕ್ಷ ರೂ.ವರೆಗೆ ಸಾಲ ಮನ್ನಾ ಮಾಡಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌ ಸ್ಪಷ್ಟಪಡಿಸಿದ್ದಾರೆ. 

ದಿ.ದೇವರಾಜ ಅರಸರ 103ನೇ ಜಯಂತಿ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಇತ್ತೀಚೆಗೆ ಸರ್ಕಾರ ಹೊರಡಿಸಿದ ಆದೇಶದಲ್ಲಿ ಪ್ರತಿ ರೈತ ಕುಟುಂಬದ ಒಬ್ಬರ ಸಾಲಮನ್ನಾ ಮಾಡುವುದಾಗಿ ಹೇಳಿದ್ದರಿಂದ ಗೊಂದಲ ಉಂಟಾಗಿತ್ತು. ಆದರೆ ರೈತರ ಕುಟುಂಬದಲ್ಲಿ ಎಷ್ಟೇ ಜನ ಕೃಷಿ ಸಾಲ ಮಾಡಿದ್ದರೂ ಮನ್ನಾ ಮಾಡಲು ತೀರ್ಮಾನಿಸಲಾಗಿದೆ. ಹಿಂದಿನ ಸರ್ಕಾರದ ಆದೇಶ ಬದಲಿಸಲಾಗಿದೆ. ಈ ವಿಷಯದಲ್ಲಿ ಯಾವ ಗೊಂದಲವೂ ಬೇಡ ಎಂದರು.


Trending videos

Back to Top