CONNECT WITH US  

ಕಾಲೂರಿನಲ್ಲಿ ಕಾಲೂರಲಾಗದ ದುಸ್ಥಿತಿ

ಭೂಕುಸಿತದಿಂದ ಹಾನಿಗೊಳಗಾದ ಮಡಿಕೇರಿ ಸಮೀಪದ ಕಾಲೂರು ರಸ್ತೆ.

ಮಡಿಕೇರಿ: ಮಹಾಮಳೆ ಸೃಷ್ಟಿಸಿದ ಕೆಸರಿನಾರ್ಭಟಕ್ಕೆ ಮಡಿಕೇರಿಯಂಚಿನ ಕಾಲೂರು ಗ್ರಾಮ ಅಕ್ಷರಶಃ ಸ್ಮಶಾನದಂತಾಗಿದ್ದು, ಮನೆ ಮಠಗಳು, ಕಾಫಿ ತೋಟಗಳು ಕಣ್ಮರೆಯಾಗಿವೆ. ಈ ಗ್ರಾಮದಲ್ಲಿ 250 ಒಕ್ಕಲು ಕುಟುಂಬದ ಅಂದಾಜು 700 ಮಂದಿ ಬದುಕು ಕಟ್ಟಿಕೊಂಡಿದ್ದರು.

ದಟ್ಟ ಅರಣ್ಯದೊಂದಿಗೆ ಏಲಕ್ಕಿ, ಕಾಫಿ ಕೃಷಿಯನ್ನು ನಡೆಸುತ್ತಲೆ, ಭತ್ತದ ಸಾಂಪ್ರದಾಯಿಕ ಕೃಷಿ ಪದ್ಧತಿ ತೊರೆಯದೆ ನೂರಾರು ವರ್ಷಗಳಿಂದ ಕಾಲೂರು ಗ್ರಾಮಗಳಲ್ಲಿ ನೆಲೆ ನಿಂತ ಮಂದಿ, ಕೊಡಗಿನ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದರು. ಆದರೆ ಸಂಸ್ಕೃತಿಗೆ ನೆಲೆ ಕಲ್ಪಿಸಿದವರಿಗೆ ಇಂದು ನೆಲೆಯೇ ಇಲ್ಲದಾಗಿದೆ.

ಹಲವು ಮನೆಗಳು ಮಣ್ಣಿನಲ್ಲಿ ಮಣ್ಣಾಗಿ ಹೋಗಿವೆ. ಪ್ರಕೃತಿಯ ರೌದ್ರ ನರ್ತನಕ್ಕೆ ಬೆಚ್ಚಿದ‌ ಗ್ರಾಮೀಣರು ದಿಕ್ಕಾಪಾಲಾಗಿ ಜಿಲ್ಲಾ ಕೇಂದ್ರ ಸೇರಿ ವಿವಿಧೆಡೆಗಳಿಗೆ ತೆರಳಿದ್ದಾರೆ. ಮತ್ತೆ ಹಿಂದಿನ ಬದುಕು ಇವರಿಗೆ ಸಾಧ್ಯವೇ ಎನ್ನುವುದನ್ನು ಭವಿಷ್ಯ ನಿರ್ಧರಿಸಬೇಕಾಗಿದೆ.

ಪ್ರಾಕೃತಿಕ ವಿಕೋಪದಿಂದ ಗ್ರಾಮದ ಸಣ್ಣ ನೀರಿನ ಹರಿವೂ ದೊಡ್ಡ ನದಿಯಾಗಿ ಹರಿದಿದ್ದು, ಇದೀಗ ನೀರಿನ ಹರಿವುಗಳೇ ಬದಲಾಗಿ ಹೋಗಿದ್ದರೆ, ರಸ್ತೆ, ವಿದ್ಯುತ್ಛಕ್ತಿ ಎನ್ನುವುದು ಮರು ಸ್ಥಾಪನೆಯಾಗಬೇಕಾದರೆ ವರ್ಷಗಳೇ ಬೇಕು. ಇಡೀ ಗ್ರಾಮವೇ ಪ್ರಕೃತಿಯ ಕೋಪಕ್ಕೆ ತುತ್ತಾಗಿ ಅಂದಾಜು ಏಳು ದಶಕಗಳಷ್ಟು ಹಿಂದಕ್ಕೆ ಹೋಗಿದೆ ಎನ್ನುವ ಮಾತು ಗ್ರಾಮಸ್ಥರದ್ದು.

Trending videos

Back to Top