CONNECT WITH US  

ನಿರ್ಮಲಾ ಪರ ರೇವಣ್ಣ ಬ್ಯಾಟಿಂಗ್‌ 

ಹಾಸನ: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ಮುಖಂಡರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೊಡಗು ಭೇಟಿ ವೇಳೆ ಪ್ರದರ್ಶಿಸಿದ ವರ್ತನೆಯನ್ನು ಖಂಡಿಸುತ್ತಿದ್ದರೆ, ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ನಿರ್ಮಲಾ ಸೀತಾ ರಾಮನ್‌ ಅವರು ರಾಜ್ಯಕ್ಕೆ ಕೊಡುಗೆ ಕೊಟ್ಟಿದ್ದಾರೆ. ಅವರ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು. 

ಕೊಡಗು ಜಿಲ್ಲೆಗೆ ಭೇಟಿ ಸಂದರ್ಭದಲ್ಲಿ ಪ್ರವಾಹಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಸಂಸದರ ನಿಧಿಯಿಂದ 1 ಕೋಟಿ ರೂ. ಮತ್ತು ರಕ್ಷಣಾ ಇಲಾಖೆಯಿಂದ 6 ಕೋಟಿ ರೂ. ಸೇರಿ 7 ಕೋಟಿ ರೂ. ನೆರವು ಘೋಷಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಇಲಾಖೆ ಭೂಮಿ ಬಿಟ್ಟುಕೊಡುವಲ್ಲಿಯೂ ಕೇಂದ್ರ ಸಚಿವರು ಉದಾರತೆಯಿಂದ ನಡೆದುಕೊಂಡಿದ್ದಾರೆ ಎಂದು ಪ್ರಶಂಸಿಸಿದರು.

ಇಂದು ಹೆಚ್ಚು ಓದಿದ್ದು

Trending videos

Back to Top