ದಶಕದಷ್ಟು ಹಿಂದಕ್ಕೆ ಸರಿದ ಕಾಫಿನಾಡು ಕೊಡಗು

Team Udayavani, Aug 28, 2018, 6:00 AM IST

ban28081807medn.jpg

ಬೆಂಗಳೂರು: ಕಾಫಿ ನಾಡು ಖ್ಯಾತಿಯ ಕೊಡಗಿನಲ್ಲಿ ಸುರಿದ ಮಳೆಗೆ ಜಿಲ್ಲೆಯ ಬಹುತೇಕ ಕಡೆ ಕಾಫಿ ಬೆಳೆ ನೆಲ ಕಚ್ಚಿದ್ದು ಭೂಕುಸಿತವಾದ ಪ್ರದೇಶದಲ್ಲಿ ಮತ್ತೆ ಕಾಫಿ ಬೀಜ ಕಾಣಲು ದಶಕವೇ ಬೇಕಾಗಬಹುದು.

ಮಳೆಯ ಆರ್ಭಟಕ್ಕೆ ಉತ್ತರ ಕೊಡಗಿನಲ್ಲಿ ಕಾಫಿ ತೋಟಗಳಿದ್ದ ಗುಡ್ಡಗಳೇ ಕೊಚ್ಚಿ ಹೋಗಿದ್ದು, ಸದ್ಯಕ್ಕೆ ಅಲ್ಲಿ ಕಾಫಿ ಬೆಳೆಯನ್ನು ಕಲ್ಪಿಸಿಕೊಳ್ಳಲಾಗದಂತಹ ಸ್ಥಿತಿಗೆ ತಲುಪಿದೆ.

ಕಾಫಿ ಮಂಡಳಿ ಪ್ರಾಥಮಿಕ ವರದಿಯಲ್ಲಿ 5,000 ಎಕರೆ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆಯೆಂಬ ಮಾಹಿತಿಯಿದೆ. ದಕ್ಷಿಣ ಕೊಡಗಿನಲ್ಲಿ ಕಾಫಿ ಫ‌ಸಲು ಶೇ.60ರಿಂದ ಗರಿಷ್ಠ ಶೇ. 80ರಷ್ಟು ಹಾನಿಯಾಗಿದ್ದು, ಮತ್ತೆ ಉತ್ತಮ ಬೆಳೆ ಕಾಣಲು 2-3  ವರ್ಷ ಬೇಕಾಗಬಹುದು. ದೇಶದಲ್ಲೇ ಅತಿ ಹೆಚ್ಚು ಕಾಫಿ ಬೆಳೆಯುವ ಖ್ಯಾತಿಯ ಕೊಡಗಿನಲ್ಲಿ ಈ ಬಾರಿ ಕಾಫಿ ಫ‌ಸಲು ಭಾರೀ ಪ್ರಮಾಣದಲ್ಲಿ ಕುಸಿಯುವ ಆತಂಕ ಎದುರಾಗಿದೆ.

ದೇಶದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ ಶೇ.70ರಷ್ಟನ್ನು ಕರ್ನಾಟಕದಲ್ಲೇ ಬೆಳೆಯಲಾಗುತ್ತದೆ. ಕರ್ನಾಟಕದ ಒಟ್ಟು ಉತ್ಪಾದನೆಯಲ್ಲಿ ಕೊಡಗಿನ ಪಾಲು ಶೇ.40. ನೂರಾರು ಎಕರೆ ಕಾಫಿ ಎಸ್ಟೇಟ್‌ಗಳ ಜತೆಗೆ ಅರ್ಧ ಎಕರೆಯಿಂದ 5 ಎಕರೆ ಭೂಮಿಯಿರುವ ಕಾಫಿ ಬೆಳೆಗಾರರು ಇದಕ್ಕೆ ಕೊಡುಗೆ ನೀಡುತ್ತಿದ್ದಾರೆ. ಈ ಬಾರಿ ಸುರಿದ ಭಾರೀ ಮಳೆ ಜಿಲ್ಲೆಯ ಕಾಫಿ ಬೆಳೆ, ಉದ್ಯಮದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

15-20 ವರ್ಷ ಬೇಕು: ಉತ್ತರ ಕೊಡಗಿನ 35 ಗ್ರಾಮಗಳಲ್ಲಿ ಕಾಫಿ ತೋಟ ಅಕ್ಷರಶಃ ಕೊಚ್ಚಿ ಹೋಗಿದೆ. ಗಿಡ, ಮಣ್ಣು ಸಹ ನೀರಿನ ಪ್ರವಾಹದಲ್ಲಿ ಹರಿದು ಹೋಗಿವೆ. ಜತೆಗೆ ಭೂಕುಸಿತ ಉಂಟಾಗಿರುವುದರಿಂದ ಭೂಮಿಯ ರಚನೆಯೇ ಬದಲಾಗಿದೆ. ಹಾಗಾಗಿ ಹೊಸದಾಗಿಯೇ ಮಣ್ಣು ಹದ ಮಾಡಿ ತೋಟ ಸಿದ್ಧಪಡಿಸಿ ಕಾಫಿ ಬೆಳೆ ಆರಂಭಿಸಬೇಕಿದೆ. ಈ ಪ್ರಕ್ರಿಯೆಗಳೆಲ್ಲ ನಡೆದು ಮತ್ತೆ ಕಾಫಿ ಬೆಳೆ ಫ‌ಸಲು ಪಡೆಯಲು 10ರಿಂದ 15 ವರ್ಷ ಬೇಕು ಎನ್ನುತ್ತಾರೆ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಎಂ. ಕಾವೇರಪ್ಪ.

ಈ ಭಾಗದಲ್ಲಿ ಅರ್ಧ ಎಕರೆಯಿಂದ ನಾಲ್ಕೈದು ಎಕರೆ ತೋಟವಿರುವ ಕಾಫಿ ಬೆಳೆಗಾರರೇ ಶೇ.80ರಷ್ಟಿದ್ದಾರೆ. ಆದರೆ ತೋಟದ ಕುರುಹೂ ಇಲ್ಲದಂತೆ ನಾಶವಾಗಿದ್ದು, ಮತ್ತೆ ಹೊಸದಾಗಿಯೇ ಎಲ್ಲವನ್ನೂ ಸೃಷ್ಟಿಸಬೇಕಿದೆ. ಕಾಫಿ ಮಂಡಳಿ ಪ್ರಾಥಮಿಕ ವರದಿಯಂತೆ 5,000 ಎಕರೆ ತೋಟ ನಾಶವಾಗಿ, ಭೂಕುಸಿತ ಉಂಟಾಗಿದೆ ಎಂದು ಉಲ್ಲೇಖೀಸಲಾಗಿದೆ. ಆದರೆ ವಾಸ್ತವದಲ್ಲಿ 10,000 ಎಕರೆಗಿಂತ ಹೆಚ್ಚು ಪ್ರದೇಶದ ತೋಟ ಹಾಳಾಗಿದೆ ಎಂದು ಹೇಳಿದ್ದಾರೆ.

ಇನ್ನು ದಕ್ಷಿಣ ಕೊಡಗು ಭಾಗದಲ್ಲಿ ಭೂಕುಸಿತ ಉಂಟಾಗದಿದ್ದರೂ ಬೆಳೆ ನಾಶವಾಗಿದೆ. ಕಾಫಿ ಮಾತ್ರವಲ್ಲದೆ ಮೆಣಸು, ಏಲಕ್ಕಿ, ಬಾಳೆ ಬೆಳೆಯೂ ನಷ್ಟವಾಗಿದೆ. ಗುಡ್ಡಗಳೇ ನೀರಂತೆ ಹರಿದಿರುವುದರಿಂದ ನೆರಳಿನಲ್ಲೇ ಬೆಳೆಯುವ ಏಲಕ್ಕಿ ಬೆಳೆಗೆ ಹಲವೆಡೆ ಪೂರಕ ವಾತಾವರಣವೇ ಇಲ್ಲದಂತಾಗಿದೆ. ಈ ಭಾಗದಲ್ಲಿ ಮತ್ತೆ ಕಾಫಿ ಬೆಳೆ ತೆಗೆಯಲು 2-3 ವರ್ಷ ಬೇಕಾಗಬಹುದೆಂದು ನೋವಿನಿಂದ ನುಡಿದರು.

ಸಂಕಷ್ಟದಲ್ಲಿ ಕಾರ್ಮಿಕರು: ಉತ್ತರ ಕೊಡಗಿನಲ್ಲಿ ಭೂಕುಸಿತ ಉಂಟಾಗಿರುವುದರಿಂದ ಮತ್ತೆ ಕೃಷಿ ಚಟುವಟಿಕೆ ಆರಂಭವಾಗಲು ಸಾಕಷ್ಟು ಸಮಯವಾಗಲಿದೆ. ಅಲ್ಲಿಯವರೆಗೆ ಲಕ್ಷಾಂತರ ಕಾರ್ಮಿಕರ ಜೀವನ ನಿರ್ವಹಣೆ ಹೇಗೆಂಬ ಆತಂಕ ಮೂಡಿದೆ.

ಉತ್ತಮ ಫ‌ಸಲಿನ ನಿರೀಕ್ಷೆ ಮಣ್ಣುಪಾಲು: ರಾಜ್ಯದಲ್ಲಿ ಮೂರು ವರ್ಷ ಬರ ಕಾಣಿಸಿಕೊಂಡಿದ್ದರಿಂದ ಉತ್ತಮ ಕಾಫಿ ಫ‌ಸಲು ಪಡೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ಪೂರಕ ವಾತಾವರಣ, ಗಿಡದಲ್ಲಿ ಸಾಕಷ್ಟು ಹೂವು ಸೃಷ್ಟಿಯಾಗಿದ್ದರಿಂದ ಬೆಳೆಗಾರರು ಉತ್ತಮ ಫ‌ಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಮಳೆಯಿಂದಾಗಿ ಕಾಫಿ ಫ‌ಸಲು ತೀವ್ರ ನಷ್ಟವಾಗಿದೆ. ಸಾಲ ಮಾಡಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಎಂ.ಎಸ್‌. ಭೋಜೇಗೌಡ ಹೇಳಿದರು.

1,5000 ಮಂದಿ ಸಣ್ಣ ಬೆಳೆಗಾರರ ಕಾಫಿ ಬೆಳೆ ನಷ್ಟವಾಗಿದ್ದು, ಮತ್ತೆ ಉತ್ತಮ ಬೆಳೆ ಪಡೆಯಲು ಎರಡೂ¾ರು ವರ್ಷ ಕಾಯಬೇಕು. ಅಲ್ಲಿಯವರೆಗೆ ಬೆಳೆಗಾರರು, ತೋಟಗಳನ್ನೇ ಅವಲಂಬಿಸಿರುವ ಕಾರ್ಮಿಕರ ಸ್ಥಿತಿ ಅಯೋಮಯವಾಗಿದೆ. ಪರಿಸರ ಸಂರಕ್ಷಣೆ ಜತೆಗೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದೇಶದಲ್ಲೇ ಉನ್ನತ ಸ್ಥಾನದಲ್ಲಿರುವ ಕೊಡಗಿನ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನ ನೀಡದಿರುವುದು ದುರದೃಷ್ಟಕರ.
– ನಂದ ಸುಬ್ಬಯ್ಯ, ಕೊಡಗು ಜಿಲ್ಲಾ ಸಣ್ಣ ಬೆಳೆಗಾರರ ಸಂಘದ ಉಪಾಧ್ಯಕ್ಷ

ಕಂದಾಯ ಇಲಾಖೆ ಹಾಗೂ ಕಾಫಿ ಮಂಡಳಿ ವತಿಯಿಂದ ನಷ್ಟ ಪ್ರಮಾಣದ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ದೇಶಾದ್ಯಂತ ಇರುವ ಮಂಡಳಿ ಅಧಿಕಾರಿಗಳನ್ನು ಈ ಕಾರ್ಯಕ್ಕೆ ಬಳಸಲಾಗುತ್ತಿದೆ. ವರದಿ ಕೈ ಸೇರಿದ ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸದ್ಯದಲ್ಲೆ ಬೆಳೆಗಾರರ ಪ್ರತಿನಿಧಿಗಳು, ಕಾಫಿ ಬೋರ್ಡ್‌ನ ಪದಾಧಿಕಾರಿಗಳು ಹಾಗೂ ಆ ಭಾಗದ ಜನಪ್ರತಿನಿಧಿಗಳ ಸಭೆ ಕರೆದು ನಷ್ಟ, ಪರಿಹಾರ, ಪುನಶ್ಚೇತನ ಕುರಿತು ಚರ್ಚಿಸಲಾಗುವುದು.
– ಎಂ.ಎಸ್‌. ಭೋಜೇಗೌಡ, ಕಾಫಿ ಬೋರ್ಡ್‌ ಅಧ್ಯಕ್ಷ

– ಕೀರ್ತಿಪ್ರಸಾದ್‌ ಎಂ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.