CONNECT WITH US  

ಕೊಗ್ರೆ ಸುತ್ತಮುತ್ತ  ಮತ್ತೆ ಭೂಕಂಪನ

ಸಾಂದರ್ಭಿಕ ಚಿತ್ರ.

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದ ಸುತ್ತಮುತ್ತ ಸೋಮವಾರವೂ ಮತ್ತೆ ಭೂಮಿಯೊಳಗಿನಿಂದ ಭಾರೀ ಶಬ್ದ ಕೇಳಿಸಿದ್ದು, ಭೂಮಿ ಕಂಪಿಸಿದ ಅನುಭವವಾಗಿದೆ.

ಜೂನ್‌ನಿಂದಲೂ ಕೊಗ್ರೆ, ಅತ್ತಿಕುಡಿಗೆ, ಬೈರೇದೇವರು, ಬೆತ್ತದಕೊಳಲು ಗ್ರಾಮಗಳಲ್ಲಿ ಭೂಮಿಯೊಳಗಿನಿಂದ ಭಾರೀ ಶಬ್ದ ಕೇಳಿ ಬರುತ್ತಿದೆ. ಶಬ್ದ ಬರುವಾಗ ಭೂಮಿ ಕಂಪಿಸಿದ ಅನುಭವವಾಗುತ್ತದೆ. ಶುಕ್ರವಾರ ಮಧ್ಯರಾತ್ರಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಎರಡು ದಿನದ ನಂತರ ಸೋಮವಾರ ಮಧ್ಯಾಹ್ನ 12.05ರ ಸಮಯದಲ್ಲಿ ಮತ್ತೂಮ್ಮೆ ಶಬ್ದ ಕೇಳಿ ಬಂದಿದೆ. "ಈ ವರೆಗೆ ಕೇಳಿ ಬಂದಿದ್ದ ಶಬ್ದಕ್ಕಿಂತಲೂ ಸೋಮವಾರ ಕೇಳಿದ ಶಬ್ದ ಬಹಳ ಜೋರಾಗಿತ್ತು. ಭೂಮಿ ಕಂಪಿಸಿದ ಅನುಭವವಾಯಿತು. 

ಮನೆಯೊಳಗಿದ್ದ ಕೆಲವು ಪಾತ್ರೆಗಳೂ ನೆಲಕ್ಕುರುಳಿದವು'ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಭೂಕಂಪದ ಭಯ ಬೇಡ. ಆ ರೀತಿಯ ಯಾವುದೇ ಸಾಧ್ಯತೆಗಳೂ ಇಲ್ಲವೆಂದು ಜಿಲ್ಲಾಡಳಿತ ಹೇಳಿದೆಯಾದರೂ, ಪ್ರತಿನಿತ್ಯ ಈ ರೀತಿಯ ಶಬ್ದ ಕೇಳಿ ಬರುತ್ತಿರುವುದು, ಭೂಮಿ ಕಂಪಿಸಿದಂತಾಗುತ್ತಿರುವುದರಿಂದ ಗ್ರಾಮಸ್ಥರಲ್ಲಿನ ಆತಂಕ ಕಡಿಮೆಯಾಗಿಲ್ಲ.

ಇಂದು ಹೆಚ್ಚು ಓದಿದ್ದು

ಧಾರವಾಡ: ನಗರದ ಬಿಬಿಎ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಆರ್‌.ಆರ್‌. ಬಿರಾದಾರ ಮಾತನಾಡಿದರು.

Dec 12, 2018 05:26pm

Trending videos

Back to Top