CONNECT WITH US  

ಬಸ್‌ ಅಪಘಾತ: ನಾಲ್ವರ ದುರ್ಮರಣ

ಶಿರಾ: ರಾಷ್ಟ್ರೀಯ ಹೆದ್ದಾರಿ 48ರ ಶಿರಾ-ತುಮಕೂರು ಮಾರ್ಗದ ಕಳ್ಳಂಬೆಳ್ಳ ಪೊಲೀಸ್‌ ಠಾಣೆ ಮುಂಭಾಗ ಮಂಗಳವಾರ ಬೆಳಗ್ಗೆ 5.15ರ ಸುಮಾರಿಗೆ ಕೆಎಸ್‌ಆರ್‌ ಟಿಸಿ ಮತ್ತು ಖಾಸಗಿ ಬಸ್‌ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ. ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಾರವಾರದ ಸಶಸ್ತ್ರ ಮೀಸಲು ಪಡೆಯ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ರಮೇಶ್‌ ಪಿ. ನಾಯಕ್‌ (55), ನಿಖೀತ (35), ಬಸ್‌ನ ಹೆಚ್ಚುವರಿ ಬಸ್‌ ಚಾಲಕ ಧನರಾಜ್‌ (54) ಹಾಗೂ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಧಾರವಾಡದ ನೀರಾವರಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ದೀಪಕ್‌ ಎನ್‌ ಮಣ್ಣಮ್ಮನವರ್‌ (32) ಮೃತರು. 15 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಓವರ್‌ಟೇಕ್‌ ಮಾಡಲು ಮುಂದಾದ ಖಾಸಗಿ ಸಂಸ್ಥೆಯ ಸೀ ಬರ್ಡ್‌ ಬಸ್‌, ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ ಆರ್‌ಟಿಸಿ ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಯಿತು.

ಡಿಕ್ಕಿ ಹೊಡೆದ ಶಬ್ಧಕ್ಕೆ ಗ್ರಾಮದ ಜನರು ಎಚ್ಚರಗೊಂಡು, ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸುವಲ್ಲಿ ನೆರವಾದರು. ಅಪಘಾತದಿಂದಾಗಿ ಒಂದು ಕಿಲೋ ಮೀಟರ್‌ ಉದ್ದಕ್ಕೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಘಟನೆ ಕುರಿತು ಕಳ್ಳಂಬೆಳ್ಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Trending videos

Back to Top