CONNECT WITH US  

ರೈತರ ಸಾಲಮನ್ನಾಕ್ಕಾಗಿ ತಹಶೀಲ್ದಾರ್‌ ಅಪಹರಣ

ಕೆ.ಆರ್‌.ಪೇಟೆ: ಈ ಹಿಂದೆ ತಹಶೀಲ್ದಾರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಮಹೇಶ್ಚಂದ್ರ ಅವರ ಅಪಹರಣಕ್ಕೆ ಸಂಬಂಧಿಸಿದಂತೆ ಕೆ.ಆರ್‌.ನಗರ ಪೊಲೀಸರು ಐವರನ್ನು ಬಂಧಿಸಿದ್ದು, ರೈತರ ಸಾಲಮನ್ನಾಕ್ಕೆ ಒತ್ತಡ ಹೇರಲು ಈ ಕೃತ್ಯ ಎಸಗಿರುವ ವಿಚಾರ ಬೆಳಕಿಗೆ ಬಂದಿದೆ. ತಾಲೂಕಿನ  ಶೀಳನೆರೆಯ ಕೆ.ಎನ್‌.ಯೋಗೇಂದ್ರ (30), ಇನ್ಫೋಸಿಸ್‌ ಉದ್ಯೋಗಿ ಎಸ್‌.ಎನ್‌.ದೀಪಕ್‌ (29), ಎಂಬಿಎ ಪದವೀಧರ ಸೋಮಶೇಖರ್‌ (31), ಕಾರು ಚಾಲಕನಾಗಿರುವ ಚಂದು (24), ಕಿಕ್ಕೇರಿಯ ಶ್ರೇಯಸ್‌(28) ಬಂಧಿತರು. ಮಹೇಶ್ಚಂದ್ರ ಅವರನ್ನು ಒತ್ತೆಯಾಳಾಗಿ ಇಟ್ಟುಕೊಂಡು ರೈತರ ಸಂಪೂರ್ಣ
ಸಾಲಮನ್ನಾ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದರಿಂದ ಸಮಾಜದ ಕಣ್ಣಿಗೆ ಹೀರೋಗಳಂತೆ ವಿಜೃಂಭಿಸಬಹುದು ಎಂಬುದು ತಮ್ಮ ಭಾವನೆಯಾಗಿತ್ತು ಎಂದು ಆರೋಪಿಗಳು ತಿಳಿಸಿದ್ದಾರೆ.

Trending videos

Back to Top