CONNECT WITH US  

ನಾನು ಚುನಾವಣೆಗೆ ನಿಲ್ಲುತ್ತೇನೆ ಅಂದಿದ್ದೇನಾ?: ಸಿದ್ದರಾಮಯ್ಯ ಕಿಡಿ

 ಹುಬ್ಬಳ್ಳಿ : 'ನಾನು ಎಲ್ಲಿಯಾದರೂ ಮುಂದಿನ ಚುನಾವಣೆಗೆ ನಿಲ್ಲುತ್ತೇನೆ ಅಂದಿದ್ದೇನಾ' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಕಿಡಿ ಕಾರಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಹೇಳಿದ್ದು ಮುಂದೆ ಜನ ಆಶೀರ್ವಾದ ಮಾಡಿದರೆ ಸಿಎಂ ಆಗ್ತೇನೆ  ಎನ್ನುವುದಾಗಿ. ಈಗ ಆಗುತ್ತೇನೆ ಅಂದಿದ್ದೇನಾ ಎಂದು ಪ್ರಶ್ನಿಸಿದರು. 

ಸಮ್ಮಿಶ್ರ ಸರ್ಕಾರ ಭದ್ರವಾಗಿದೆ. ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರುತ್ತಾರೆ ಎನ್ನುವುದು ಸುಳ್ಳು ಎಂದು ಕಿಡಿ ಕಾರಿದರು. 

ನಮ್ಮ ಅವಧಿಯ ಎಲ್ಲಾ ಯೋಜನೆಗಳಿಗೆ ಹಣ ಬಿಡುಗಡೆಯಾಗುತ್ತದೆ. ಈ ಬಗ್ಗೆ ಸಮನ್ವಯ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಸುವುದಾಗಿ ಸಿದ್ದರಾಮಯ್ಯ ಹೇಳಿದರು. 

ಸಿದ್ದರಾಮಯ್ಯ ಅವರು ಬುಧವಾರ ಬಾದಾಮಿಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದು, ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ. 

Trending videos

Back to Top