CONNECT WITH US  

ಆರ್‌ಎಸ್‌ಎಸ್‌ ಬೈಠಕ್‌ ಶುರು

ರಾಯಚೂರು: ಮಂತ್ರಾಲಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖೀಲ ಭಾರತೀಯ ಸಮನ್ವಯ ಬೈಠಕ್‌ಗೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ಶ್ರೀ ಶುಕ್ರವಾರ ಚಾಲನೆ ನೀಡಿದರು.

ಇಲ್ಲಿನ ತಿರುಪತಿ ತಿರುಮಲ ವಸತಿ ಗೃಹದಲ್ಲಿ ಸಭೆ ಹಮ್ಮಿಕೊಂಡಿದ್ದು,3 ದಿನ ನಡೆಯಲಿದೆ. ದೇಶದ ವಿವಿಧ
ಭಾಗಗಳಿಂದ 200ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಜಗದ್ಗುರು ಸ್ಥಾನದಲ್ಲಿರುವ ಭಾರತವನ್ನು ಮತ್ತಷ್ಟು ಬಲಪಡಿಸುವಲ್ಲಿ ಆರೆಸ್ಸೆಸ್‌ ಜತೆ ಕೈ ಜೋಡಿಸಬೇಕು ಎಂದರು.

ನಂತರ ಸುದ್ದಿಗೋಷ್ಠಿ ನಡೆಸಿದ ಅಖೀಲ ಭಾರತೀಯ ಪ್ರಚಾರ ಪ್ರಮುಖ ಅರುಣ ಜೀ, ಇಲ್ಲಿ ಚರ್ಚೆಗೆ ಮಾತ್ರ ಅವಕಾಶವಿದ್ದು, ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ. ಅಮಿತ್‌ ಶಾ ಆರ್‌ಎಸ್‌ಎಸ್‌ನ ಅಂಗ ಸಂಸ್ಥೆ ಮುಖ್ಯಸ್ಥರಾಗಿದ್ದರಿಂದ ಪಾಲ್ಗೊಂಡಿದ್ದಾರೆ. ಇದು ರಾಜಕೀಯ ಪ್ರೇರಿತವಲ್ಲ.ಯಾವುದೇ ಚುನಾವಣೆಗಳ ಕುರಿತು ಚರ್ಚಿಸುವುದಿಲ್ಲ ಎಂದರು.


Trending videos

Back to Top