ಸೆ.15ರವರೆಗೆ ರೈಲು ಸಂಚಾರ ರದ್ದು

ಹಾಸನ: ಭೂಕುಸಿತ ಹಿನ್ನೆಲೆಯಲ್ಲಿ ಹಾಸನ-ಮಂಗಳೂರು ನಡುವಿನ ರೈಲು ಸಂಚಾರವ ನ್ನು ಸೆ.15ರವರೆಗೆ ರದ್ದುಪಡಿಸಲಾಗಿದೆ.
ಸಕಲೇಶಪುರ - ಸುಬ್ರಹ್ಮಣ್ಯ ನಡುವಿನ ಘಟ್ಟ ಪ್ರದೇಶದ 56 ಕಿ.ಮೀ.ರೈಲು ಮಾರ್ಗದಲ್ಲಿ 68 ಕಡೆ ರೈಲು ಹಳಿಗಳ ಮೇಲೆ ಭೂಕುಸಿತವಾಗಿದೆ.
ಬೆಂಗಳೂರು - ಕಣ್ಣೂರು/ ಕಾರವಾರ ಎಕ್ಸ್‌ಪ್ರಸ್ ರೈಲು ಸಂಚಾರವನ್ನು ಸೆ.11ರವರೆಗೆ, ಕಣ್ಣೂರು/ಕಾರವಾರ - ಬೆಂಗಳೂರು ಎಕ್ಸ್‌ಪ್ರಸ್ ರೈಲು ಸಂಚಾರ ಸೆ.15 ರವರೆಗೆ, ಯಶವಂತಪುರ - ಕಾರವಾರ ಎಕ್ಸ್‌ಪ್ರೆಸ್,ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಂಚಾರ ಸೆ.14ರವರೆಗೆ ರದ್ದಾಗಿದೆ. ಆದರೆ,ಯಶವಂತಪುರ - ಕಾರವಾರ ಎಕ್ಸ್‌ಪ್ರೆಸ್ ರೈಲು ಸಂಚಾರ ಹಾಸನದವರೆಗೆ ಮುಂದುವರಿಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.