CONNECT WITH US  

15ರಂದು ಕೆಎಲ್‌ಎಸ್‌ ಅಮೃತ ಮಹೋತ್ಸವ

ರಾಷ್ಟ್ರಪತಿ ಕಾರ್ಯಾಲಯದಿಂದ ಬರುವ ಸೂಚನೆ ಮೇರೆಗೆ ಆಹ್ವಾನ ಪತ್ರಿಕೆ ಸಿದ್ಧ

ಬೆಳಗಾವಿ: ಇಲ್ಲಿಯ ಪ್ರತಿಷ್ಠಿತ ಕರ್ನಾಟಕ ಲಾ ಸಂಸ್ಥೆ (ಕೆಎಲ್‌ಎಸ್‌)ಯ ಅಮೃತ ಮಹೋತ್ಸವ ಸೆ.15ರಂದು ಜರುಗಲಿದ್ದು, ಸಮಾರಂಭಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ, ರಾಜ್ಯಪಾಲ ವಿ.ಆರ್‌.ವಾಲಾ, ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಲಿದ್ದಾರೆ ಎಂದು ಕೆಎಲ್‌ಎಸ್‌ ಅಧ್ಯಕ್ಷ ಅನಂತ ಮಂಡಗಿ ತಿಳಿಸಿದರು.

ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 1939ರಲ್ಲಿ ಸಪ್ತರ್ಷಿಗಳು ಆರಂಭಿಸಿದ ಕರ್ನಾಟಕ ಲಾ ಸೊಸೈಟಿ ಇಂದು ಹೆಮ್ಮರವಾಗಿ 
ಬೆಳೆದಿದೆ. 75 ವರ್ಷಗಳ ಪೂರ್ಣಗೊಳಿಸಿ ಸಾರ್ಥಕತೆ ಪಡೆದುಕೊಂಡಿದೆ. ಈ ಹೆಮ್ಮೆಯ ಕ್ಷಣದ ಸಾಧನೆಯ ಮೈಲುಗಲ್ಲು ಅಭಿನಂದಿಸಲು ಕಾರ್ಯಕ್ರಮ ಹಮ್ಮಿ  ಕೊಳ್ಳಲಾಗಿದೆ. ಕಾರ್ಯಕ್ರಮದ ಪಟ್ಟಿ ಸಿದ್ಧಗೊಂಡಿಲ್ಲ. ರಾಷ್ಟ್ರಪತಿ ಕಾರ್ಯಾಲಯದಿಂದ ಬರುವ ಸೂಚನೆ ಮೇರೆಗೆ ಆಹ್ವಾನ ಪತ್ರಿಕೆ ಸಿದ್ಧಗೊಳಿಸಲಾಗುವುದು. ಜತೆಗೆ ಪೊಲೀಸರ ನಿರ್ದೇಶನದಂತೆ ಜಿಐಟಿ ಕಾಲೇಜು ಕ್ಯಾಂಪಸ್‌ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.


Trending videos

Back to Top