CONNECT WITH US  

ಜಾರಕಿಹೊಳಿ ಕ್ಷೇತ್ರ:ಎಲ್ಲಾ ಪಕ್ಷೇತರರ ಗೆಲುವಿನ ಹಿಂದಿನ ಗುಟ್ಟೇನು?

ಬೆಳಗಾವಿ: ಸಚಿವ ರಮೇಶ್‌ ಜಾರಕಿಹೊಳಿ ಅವರ ಹಿಡಿತವಿರುವ ಜಿಲ್ಲೆಯ ಕೊಣ್ಣೂರು ಪುರಸಭೆ  ಮತ್ತು ಖಾನಾಪುರ ಪಟ್ಟಣ ಪಂಚಾಯಿತಿಯಲ್ಲಿ ಎಲ್ಲಾ ಸ್ಥಾನಗಳನ್ನು ಪಕ್ಷೇತರರು ಗೆದ್ದು  ಗಮನಸೆಳೆದಿದ್ದಾರೆ. 

ಫ‌ಲಿತಾಂಶ ನೋಡಿ ಎಲ್ಲಾ ರಾಜಕೀಯ ವಿಶ್ಲೇಷಕರು ಯಾಕೆ ಹೀಗಾಯ್ತು ಎಂದು ಲೆಕ್ಕಾಚಾರ ಹಾಕಲು ಶುರು ಮಾಡಿಕೊಂಡಿದ್ದಾರೆ. ಅಷ್ಟರಲ್ಲಾಗಲೆ ಗೆದ್ದ ಎಲ್ಲರೂ ಜಾರಕಿಹೊಳಿ ಬೆಂಬಲಿಗರು ಎನ್ನುವ ಅಸಲಿ ವಿಚಾರ ಬಯಲಾಗಿದೆ. 

ತಮ್ಮ ಭದ್ರ ಕೋಟೆಯಲ್ಲಿ ಹೊಸದೊಂದು ರಾಜಕೀಯ ತಂತ್ರ ಹಣೆದಿದ್ದ  ಜಾರಕಿಹೊಳಿ ಅವರು ಎಲ್ಲರಿಗೂ ಪಕ್ಷೇತರರನ್ನಾಗಿ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಕೊಣ್ಣೂರು ಪುರಸಭೆಯಲ್ಲಿ  23ಕ್ಕೆ 23 ಸ್ಥಾನಗಳನ್ನು  ಮತ್ತು ಖಾನಾಪುರ ಪಟ್ಟಣ ಪಂಚಾಯತ್‌ನಲ್ಲಿ 20 ಕ್ಕೆ 20 ಸ್ಥಾನಗಳನ್ನು ಪಕ್ಷೇತರರು (ಕಾಂಗ್ರೆಸ್‌) ಗೆದ್ದು ಕೊಂಡಿದ್ದಾರೆ. 

Trending videos

Back to Top