CONNECT WITH US  

ಯುರೋಪ್‌ ಪ್ರವಾಸಕ್ಕೆ ಹೊರಟ ಸಿದ್ದು

ಬೆಂಗಳೂರು: ರಾಜಕೀಯ ಜಂಜಾಟಗಳ ನಡುವೆಯೇ ಮಾಜಿ ಮುಖ್ಯ ಮಂತ್ರಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಯುರೋಪ್‌ ಪ್ರವಾಸ ಕೈಗೊಂಡಿದ್ದಾರೆ.

ಯಾವಾಗಲೂ ಪಂಚೆ ಜುಬ್ಟಾದಲ್ಲಿಯೇ ಇರುತ್ತಿದ್ದ ಸಿದ್ದರಾಮಯ್ಯ, ಸೂಟು ಪ್ಯಾಂಟು ತೊಟ್ಟು ವಿದೇಶ ಪ್ರವಾಸ ಕೈಗೊಂಡಿದ್ದು, ಅನೇಕ ಅಭಿಮಾನಿಗಳು ಅವರಿಗೆ ಪುಷ್ಪಗುಚ್ಚ ನೀಡಿ ಬೀಳ್ಕೊಟ್ಟರು. ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಎಲ್ಲ ಎಂಬ ಮಾತು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ವಿದೇಶ ಪ್ರವಾಸ ಕೈಗೊಂಡಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆರಂಭದಲ್ಲಿ ಸಿದ್ದರಾಮಯ್ಯ ಪತ್ನಿ ಹಾಗೂ ಮೊಮ್ಮಕ್ಕಳೊಂದಿಗೆ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ ಎಂದುಹೇಳಲಾಗಿತ್ತು. ಆದರೆ, ಪುತ್ರ ಶಾಸಕ ಯತೀಂದ್ರ, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಹಾಗೂ ಅವರ ಪುತ್ರನೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈ ಮಾರ್ಗವಾಗಿ ಯುರೋಪ್‌ ಪ್ರವಾಸ ತೆರಳಿದರು.

ಅವರೊಂದಿಗೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಕೂಡ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆದರೆ, ದೇಶಪಾಂಡೆ ವಿದೇಶ ಪ್ರವಾಸ ಹೋಗುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿದು ಬಂದಿದೆ. ಸಚಿವ ಕೆ.ಜೆ.ಜಾರ್ಜ್‌ ಕೂಡ ಈಗಾಗಲೇ ವಿದೇಶ ಪ್ರವಾಸಕೈಗೊಂಡಿದ್ದಾರೆ. ಶಾಸಕರಾದ ಭೈರತಿ ಬಸವರಾಜ್‌ ಹಾಗೂ ಎಸ್‌.ಟಿ. ಸೋಮಶೇಖರ್‌ ಸೇರಿ ಕೆಲವು ಶಾಸಕರು ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಾಕ್ಕೆ ತೆರಳಿದ್ದು, ಅವರೂ ವಿದೇಶದಲ್ಲಿ ಸಿದ್ದರಾಮಯ್ಯ ಅವರನ್ನು ಸೇರಿ ಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿದ್ದರಾಮಯ್ಯ ವಿದೇಶ ಪ್ರವಾಸಕೈಗೊಂಡ ಸಂದರ್ಭದಲ್ಲಿ ರಾಜಕೀಯ ಬೆಳವಣಿಗೆ ಆಗಲಿದ್ದು, ಸರ್ಕಾರಕ್ಕೆ ಕಂಟಕ
ಎದುರಾಗು ತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು. ಪ್ರವಾಸಕ್ಕೆ ತೆರಳುವ ಮುನ್ನ
ಮಾಧ್ಯಮಗಳೊಂದಿಗೆ ಮಾತನಾಡಿದಸಿದ್ದರಾಮಯ್ಯ, ಇಂಗ್ಲೆಂಡ್‌,  ಸ್ಕಾಟ್ಲಾಂಡ್‌, ಫ್ರಾನ್ಸ್‌, ಜರ್ಮನಿ
ಸೇರಿದಂತೆ ಯುರೋಪಿನ ರಾಷ್ಟ್ರಗಳಲ್ಲಿ 10 ದಿನಗಳ ಕಾಲ ಪ್ರವಾಸ ನಡೆಸುತ್ತೇನೆ.

ರಾಜಕೀಯ ಜಂಜಾಟದ ನಡುವೆ ಬಿಡುವು ಮಾಡಿಕೊಂಡು ವಿಶ್ರಾಂತಿಗೆ  ತೆರಳುತ್ತಿದ್ದೇನೆ. ಇದರಲ್ಲಿ ಯಾವುದೇ
ವಿಶೇಷತೆ ಇಲ್ಲ ಎಂದು ಹೇಳಿದರು.

Trending videos

Back to Top