ಶಿವಮೊಗ್ಗ ಪಾಲಿಕೆಯಲ್ಲಿ ಬಿಜೆಪಿ ಜಯಭೇರಿ

ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಬಿಜೆಪಿ ಸರಳ ಬಹುಮತ ಪಡೆದು ಅನಾಯಾಸವಾಗಿ ಗದ್ದುಗೆ ಹಿಡಿದಿದೆ. 35 ವಾರ್ಡ್ಗಳ ಪಾಲಿಕೆಯಲ್ಲಿ ಬಿಜೆಪಿ 20, ಕಾಂಗ್ರೆಸ್ 7, ಜೆಡಿಎಸ್ 2, ಎಸ್ಡಿಪಿಐ 1,ಪಕ್ಷೇತರರು 5 ಮಂದಿ ಜಯಗಳಿಸಿದ್ದಾರೆ.
ಬಹುಮತಕ್ಕೆ 18 ಹಾಗೂ ಸಂಸದ, ಶಾಸಕ, ಎಂಎಲ್ಸಿ ಸ್ಥಾನ ಸೇರಿದರೆ 21 ಸ್ಥಾನಗಳು ಬೇಕು. ಬಿಜೆಪಿ 20 ವಾರ್ಡ್ಗಳಲ್ಲಿ ಜಯಗಳಿಸಿದ್ದಲ್ಲದೆ ಇಬ್ಬರು ಶಾಸಕರು, ಇಬ್ಬರು ಎಂಎಲ್ಸಿಗಳು ಬಿಜೆಪಿಯವರೇ ಆಗಿರುವುದರಿಂದ
ಅನಾಯಾಸವಾಗಿ ಅಧಿಕಾರಕ್ಕೇರಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಲಕ್ಷಕ್ಕೂ ಹೆಚ್ಚು ಮತ ಪಡೆದ ಹಿನ್ನೆಲೆಯಲ್ಲಿ ಪಾಲಿಕೆ
ಚುನಾವಣೆಯಲ್ಲೂ ಬಿಜೆಪಿಗೆ ಅಧಿಕ ಸ್ಥಾನ ಸಿಗಬಹುದೆಂದು ವಿಶ್ಲೇಷಿಸಲಾಗಿತ್ತು. ಅದೇ ರೀತಿ ಬಿಜೆಪಿ ಬಹುಮತ ಪಡೆದಿದೆ.
ಹಿಂದಿನ ಬಲಾಬಲ: ಕಳೆದ ಅವಧಿಯಲ್ಲಿ ಬಿಜೆಪಿ 9, ಕೆಜೆಪಿ 7, ಕಾಂಗ್ರೆಸ್ 12, ಜೆಡಿಎಸ್ 5, ಎಸ್ಡಿಪಿಐ 1, ಪಕ್ಷೇತರ 1 ಸ್ಥಾನದಲ್ಲಿ ಜಯಗಳಿಸಿತ್ತು. ಮೊದಲು ಮೂರು ವರ್ಷ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರು ಸೇರಿ
ಅಧಿಕಾರ ನಡೆಸಿದರು.