CONNECT WITH US  

ಲಕ್ಷ್ಮಿಗೆ ಜಯ ತಂದಿಟ್ಟ ಕೋರ್ಟ್‌: ಜಾರಕಿಹೊಳಿ ಬ್ರದರ್ಸ್‌ಗೆ ಹಿನ್ನಡೆ

ಬೆಳಗಾವಿ : ಮುಂದೂಡಲಾಗಿದ್ದ ಬೆಳಗಾವಿ ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯನ್ನು ಕೂಡಲೆ ನಡೆಸುವಂತೆ ಧಾರವಾಡ ಹೈಕೋರ್ಟ್‌ ಪೀಠ ಆದೇಶ ನೀಡಿದೆ. ಇದರಿಂದಾಗಿ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್‌ಕರ್‌ ಅವರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. 

ಶಾಸಕಿ ಲಕ್ಷ್ಮಿ ಹೆಬ್ಬಾಳ್‌ಕರ್‌ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಸಮರಕ್ಕೆ ಕಾರಣವಾದ ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯನ್ನು ತಹಿಶೀಲ್ದಾರ್‌ ಅವರು ಮುಂದೂಡಿದ್ದರು.

ತಹಶೀಲ್ದಾರ್‌ ಕ್ರಮದ ವಿರುದ್ಧ ಲಕ್ಷ್ಮಿ ಹೆಬ್ಬಾಳ್‌ಕರ್‌ ಅವರು ಬೆಂಬಲಿಗರೊಂದಿಗೆ ಬೀದಿಗಳಿದು ಹೋರಾಟ ನಡೆಸಿದ್ದರು. ಬಹಿರಂಗವಾಗಿ ಸಚಿವ ರಮೇಶ್‌ ಜಾರಕಿಹೊಳಿ ಮತ್ತು ಶಾಸಕ ಸತೀಶ್‌ ಜಾರಕಿಹೊಳಿ ವಿರುದ್ದ ಕಿಡಿ ಕಾರಿದ್ದರು. 

ಫ‌ಲಿತಾಂಶದ ಬಳಿಕ ತೀರ್ಮಾನ
ಹೈಕೋರ್ಟ್‌ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಸತೀಶ್‌ ಜಾರಕಿಹೊಳಿ ಈ ಬಗ್ಗೆ ಚುನಾವಣೆಯ ಫ‌ಲಿತಾಂಶ ಬಂದ ಬಳಿಕ ಮಾತನಾಡುವುದಾಗಿ ತಿಳಿಸಿದ್ದಾರೆ. 

Trending videos

Back to Top