CONNECT WITH US  

ಹುಬ್ಬಳ್ಳಿ ಮನೆ ಖಾಲಿ ಮಾಡಿದ ಸಿಎಂ: ಶೆಟ್ಟರ್‌

ಹುಬ್ಬಳ್ಳಿ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಚಿವ ಎಚ್‌.ಡಿ.ರೇವಣ್ಣ ಅವರು ಸುಳ್ಳಿನ ಸರದಾರರು, ಸುಳ್ಳಿನ ಚಕ್ರವರ್ತಿಗಳು ಎಂದರೆ ತಪ್ಪಾಗಲಾರದು ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಹೇಳಿದರು.

ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಜನರು ದುಂಬಾಲು ಬೀಳುತ್ತಾರೆಂದು ಭಾವಿಸಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಇಲ್ಲಿನ ಬೈರಿದೇವರಕೊಪ್ಪದಲ್ಲಿನ ಮಾಯಕಾರ ಕಾಲೋನಿಯಲ್ಲಿದ್ದ ಮನೆ ಖಾಲಿ ಮಾಡಿದ್ದಾರೆ. ಇಲ್ಲಿಗೆ ಆಗಮಿಸಿದಾಗ ಸ್ಟಾರ್‌ ಹೋಟೆಲ್‌ನಲ್ಲಿದ್ದು ಹೋಗಲಿದ್ದಾರೆ. ಕುಮಾರಸ್ವಾಮಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಕೇವಲ ಹೊರ ರಾಜ್ಯದ ಮಠ-ಮಂದಿರಗಳಿಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿಯವರು ಉತ್ತರ ಕರ್ನಾಟಕದ ಮಠ-ಮಂದಿರಗಳಿಗೂ ಭೇಟಿ ನೀಡಿ ದರ್ಶನ ಪಡೆಯಬೇಕು. ಈ ವಿಷಯದಲ್ಲೂ ಮಲತಾಯಿ ಧೋರಣೆ ತೋರಿಸಬಾರದು ಎಂದರು. ಬೆಳಗಾವಿ ಒಳಜಗಳ ಈಗಾಗಲೇ ಆರಂಭವಾಗಿದೆ. ಈ ಜಗಳ ಸದ್ಯ ರಾಜ್ಯಮಟ್ಟದಲ್ಲಿದ್ದು, ಮುಂದೆ ಯುರೋಪ್‌ವರೆಗೂ ಹೋಗಲಿದೆ. ಇಂತಹ ಜಗಳ ಎಷ್ಟು ದಿನ ಇರುತ್ತದೆ. ಎಷ್ಟು ಜನ ಶಾಸಕರು ಇದರಿಂದ ಹೊರ ಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

Trending videos

Back to Top