CONNECT WITH US  

ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗಿ ಸಿದ್ದು ಅಧಿಕಾರ ಹೋಯ್ತು: ಯತ್ನಾಳ

ವಿಜಯಪುರ: "ಧಾರ್ಮಿಕ ಶ್ರದ್ಧೆ ಇಲ್ಲದೇ ಮಾಂಸ ಸೇವನೆ ಮಾಡಿ ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಮಾಡಿದ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು. ಮಾನಸ ಸರೋವರ ಯಾತ್ರೆ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಚಿಕನ್‌ ಸೂಪ್‌ ಸೇವಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ಅವರಿಗೂ ಸೋಲೇ ಗತಿ' ಎಂದು ವಿಜಯಪುರ ನಗರ  ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಧಾರ್ಮಿಕ ಶ್ರದ್ಧೆಯೇ ಇಲ್ಲದ ಕೇವಲ ರಾಜಕೀಯ ಲಾಭಕ್ಕಾಗಿ ದೇವಾಲಯಕ್ಕೆ ನಾಟಕೀಯ ಭೇಟಿ ನೀಡಿದರೆ ದೇಶದ ಜನರು ಒಪ್ಪಲು ಸಾಧ್ಯವಿಲ್ಲ. ರಫೆಲ್‌ ಶಸ್ತ್ರಾಸ್ತ್ರ ಪ್ರಕರಣದ ಕುರಿತು ಸ್ಪಷ್ಟ ಮಾಹಿತಿಯೇ ಇಲ್ಲದ ರಾಹುಲ್‌ ಮನಬಂದಂತೆ ಮಾತನಾಡುತ್ತಿದ್ದಾರೆ. ನೆಹರು ಸೈನಿಕರಿಗೆ ಸುಧಾರಿತ ಶಸ್ತ್ರಾಸ್ತ್ರ ನೀಡದ ಪರಿಣಾಮ ಚೀನಾ ವಿರುದ್ಧ ಭಾರತಕ್ಕೆ ಸೋಲಾಯಿತು. ಇಂದು ಪ್ರಧಾನಿ ಮೋದಿ ದೇಶದ ಸೈನಿಕರ ಕೈಗೆ ಸುಧಾರಿತ ಶಸ್ತ್ರಾಸ್ತ್ರ ನೀಡುವ ಮೂಲಕ ಬಲಪಡಿಸಿದ್ದಾರೆ. ಇದರ ಅರಿವು ರಾಹುಲ್‌ಗಿಲ್ಲ' ಎಂದರು.


Trending videos

Back to Top