CONNECT WITH US  

ನಾಳೆಯೊಳಗೆ ಚುನಾವಣೆ ನಡೆಸಿ: ಕೋರ್ಟ್‌

ಧಾರವಾಡ: ಬೆಳಗಾವಿ ಕಾಂಗ್ರೆಸ್‌ ನಾಯಕರಾದ ಜಾರಕಿಹೊಳಿ ಕುಟುಂಬ ಮತ್ತು  ಲಕ್ಷ್ಮಿ ಹೆಬ್ಟಾಳ್ಕರ್‌ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಬೆಳಗಾವಿ ತಾಲೂಕು ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸೆ.7ರೊಳಗೆ ಚುನಾವಣೆ ನಡೆಸುವಂತೆ ಧಾರವಾಡದ ಹೈಕೋರ್ಟ್‌ ಚುನಾವಣಾಧಿಕಾರಿಗೆ ಸೂಚಿಸಿದೆ.

ಈ ತೀರ್ಪಿ ನಿಂದ ಜಾರಕಿಹೊಳಿ ಕುಟುಂಬಕ್ಕೆ ಹಿನ್ನಡೆ ಉಂಟಾಗಿದೆ. ಚುನಾವಣಾಧಿಕಾರಿಗಳು ಚುನಾವಣೆಯನ್ನು ಮುಂದೂಡಿದ್ದನ್ನು ಪ್ರಶ್ನಿಸಿ ಲಕ್ಷ್ಮಿ ಬೆಂಬಲಿಗರು ಕೋರ್ಟ್‌ ಮೆಟ್ಟಿ ಲೇರಿದ್ದರು. ನ್ಯಾ|ಸುನೀಲ ದತ್ತ ಯಾದವ ಅವರಿದ್ದ ಏಕಸದಸ್ಯ ಪೀಠ, ಸಂಘದ ಪ್ರಸ್ತುತ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಅವಧಿ ಮುಕ್ತಾಯದೊಳಗೆ ಚುನಾವಣೆ ಜರುಗಿಸುವುದು ಸೂಕ್ತ ಎಂಬುದಾಗಿ ಅಭಿಪ್ರಾಯಪಟ್ಟು, ಸೆ.7ರೊಳಗೆ ಚುನಾವಣೆ ನಡೆಸುವಂತೆ ಚುನಾವಣಾಧಿಕಾರಿಗೆ ಸೂಚನೆ ನೀಡಿದೆ.

ಬೆಳಗಾವಿ ತಾಲೂಕು ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಆ.28ರಂದು ಚುನಾವಣೆ ನಡೆಸಲು ಚುನಾವಣಾಧಿಕಾರಿಗಳು ನಿಗದಿಪಡಿಸಿದ್ದರು. ನಂತರ ಸಂಘದ ಸದಸ್ಯರೊಬ್ಬರ ಕಾಣೆ ಮತ್ತು ಇತರ ಕಾರಣ ನೀಡಿ ಚುನಾವಣಾಧಿಕಾರಿಗಳು ಚುನಾವಣೆಯನ್ನು ತಾತ್ಕಾಲಿಕ ಮುಂದೂಡಿದ್ದರು. ಚುನಾವಣಾಧಿಕಾರಿಗಳ ಈ ಕ್ರಮ ಪ್ರಶ್ನಿಸಿ ಸದಸ್ಯರಾದ ಮಹಾಂತೇಶ ಪಾಟೀಲ ಮತ್ತು ಇತರರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಪೀಠವು, ಸೆ.7ರೊಳಗೆ ಚುನಾವಣೆ ನಡೆಸುವಂತೆ ಚುನಾವಣಾಧಿಕಾರಿಗೆ ಸೂಚನೆ ನೀಡಿದೆ.


Trending videos

Back to Top