CONNECT WITH US  

ರಾಜಕೀಯ ಪ್ರವೇಶವಿಲ್ಲ: ಯದುವೀರ ಒಡೆಯರ್‌

ಹಾಸನ: ರಾಜಮನೆತನದ ಪರಂಪರೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನನ್ನ  ಮೇಲಿದೆ. ಹಾಗಾಗಿ ತಾವು ಸದ್ಯಕ್ಕೆ ರಾಜಕೀಯ ಪ್ರವೇಶ ಮಾಡುವುದಿಲ್ಲ. ಆ ಬಗ್ಗೆ ಆಸಕ್ತಿಯೂ ಇಲ್ಲ ಎಂದು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ನರಸಿಂಹರಾಜ ಒಡೆಯರ್‌ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ಅಥವಾ ಮಂಡ್ಯ ಲೋಕಸಭಾ ಕ್ಷೇತ್ರದಿಂದ ತಾವು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು  ವರದಿಯಾಗಿರುವುದನ್ನು ಗಮನಿಸಿದ್ದೇನೆ. ರಾಜಕಾರಣ ಪ್ರವೇಶಿಸುವುದು ಊಹಾಪೋಹ  ಅಷ್ಟೆ.  ಜನಸೇವೆಗೆ ರಾಜಕೀಯ ಕ್ಷೇತ್ರ ಬಿಟ್ಟು ಬೇರೆ ಬೇರೆ ಕ್ಷೇತ್ರಗಳಿವೆ  ಎಂದರು.  

ಸರ್ಕಾರ ರಾಜವಂಶಸ್ಥರಿಗೆ ನೀಡುತ್ತಿರುವ ಗೌರವಧನವನ್ನು ರದ್ದುಪಡಿಸಬೇಕು ಎಂದು ವಿದ್ವಾಂಸ ನಂಜರಾಜೇ ಅರಸ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,  ಹೇಳಿಕೆಯನ್ನು ತಾವು ಗಮನಿಸಿಲ್ಲ.  ಮೈಸೂರು ರಾಜಮನೆತನದ ಆಡಳಿತ ಮಂಡಳಿ  ಈ ಬಗ್ಗೆ ಪ್ರತಿಕ್ರಿಯಿಸಲಿದೆ ಎಂದರು.

Trending videos

Back to Top