CONNECT WITH US  

ಕೇಂದ್ರ ಸರ್ಕಾರದ ವಿರುದ್ಧ ಭಾರತ್‌ ಬಂದ್‌

ಜನರು ಸ್ವಯಂ ಪ್ರೇರಿತವಾಗಿ ಶಾಂತಿಯುತ ಬಂದ್‌ಗೆ ಬೆಂಬಲ ನೀಡಲಿ:ದಿನೇಶ್‌

ಬೆಂಗಳೂರು: ಪೆಟ್ರೋಲ್‌,ಡಿಸೇಲ್‌, ಅಡುಗೆ ಅನಿಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದರೂ ಕೇಂದ್ರ ಸರ್ಕಾರ ನಿಯಂತ್ರಣ ಮಾಡದೆ ಜನ ಸಾಮಾನ್ಯರ ಮೇಲೆ ಹೊರೆ ಹೊರೆಸುತ್ತಿರುವುದನ್ನು ಖಂಡಿಸಿ ಸೆಪ್ಟಂಬರ್‌ 10 ರಂದು ಭಾರತ್‌ ಬಂದ್‌ ಕರೆ ನೀಡಲಾಗಿದ್ದು ರಾಜ್ಯದಲ್ಲೂ ಬಂದ್‌ ಯಶಸ್ವಿಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ  ಕಾಂಗ್ರೆಸ್‌ ಕರೆ ನೀಡಿರುವ ಬಂದ್‌ಗೆ ರಾಜ್ಯಾದ್ಯಂತ ಅನೇಕ ಸಂಘ ಸಂಸ್ಥೆಗಳು, ಸಾರಿಗೆ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಜನರು ಸ್ವಯಂ ಪ್ರೇರಿತವಾರಿ ಶಾಂತಿಯುತ ಬಂದ್‌ಗೆ ಬೆಂಬಲ ನೀಡಬೇಕು ಎಂದು ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಮೋದಿ ಸರ್ಕಾರ ಪೆಟ್ರೋಲ್‌,ಡಿಸೇಲ್‌ ಹೆಸರಿನಲ್ಲಿ ದೇಶದ ಜನರಿಂದ 11 ಲಕ್ಷ ಕೋಟಿ ರೂಪಾಯಿ ಲೂಟಿ ಮಾಡಿದೆ. ನಾಲ್ಕು ವರ್ಷದಲ್ಲಿ ಡಿಸೇಲ್‌ ಮೇಲೆ 446 ಪಟ್ಟು ಪೆಟ್ರೋಲ್‌ ಮೇಲೆ 229 ಪಟ್ಟು ತೆರಿಗೆ ಹೆಚ್ಚಳ ಮಾಡಿ, ಜನರ ಹಣವನ್ನು ಕೇಂದ್ರ ಸರ್ಕಾರ ಲೂಟಿ ಮಾಡಿದೆ ಎಂದು ಆರೋಪಿಸಿದರು.

2014 ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಒಂದು ಬ್ಯಾರೆಲ್‌ಗೆ 107.09 ಡಾಲರ್‌ ಇತ್ತು. ಈಗ 73 ಡಾಲರ್‌ಗೆ ಇಳಿದಿದೆ. ಶೇಕಡಾ 40 ರಷ್ಟು ಬೆಲೆ ಕಡಿಮೆಯಾಗಿದ್ದರೂ ಮೋದಿ ಸರ್ಕಾರ ದೇಶದಲ್ಲಿ ತೆರಿಗೆ ಮೂಲಕ ನಿರಂತರ ಪೆಟ್ರೋಲ್‌,ಡಿಸೇಲ್‌ ಬೆಲೆ ಏರಿಕೆ ಮಾಡುತ್ತ ಬಂದಿದೆ. ಕೇಂದ್ರ ಸರ್ಕಾರ 12 ಬಾರಿ ಪೆಟ್ರೋಲ್‌ ಮತ್ತು ಡಿಸೇಲ್‌ ಮೇಲಿನ ತೆರಿಗೆ ಏರಿಕೆ ಮಾಡಿದೆ. ಅಡುಗೆ ಅನಿಲ್‌ ಬೆಲೆಯೂ 414 ರೂಪಾಯಿಯಿಂದ 714 ರೂಪಾಯಿಗೆ ಏರಿಕೆಯಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ದುಬಾರಿ ಬೆಲೆಗೆ ಕಚ್ಚಾ ತೈಲ ಖರೀದಿಸಿ, ವಿದೇಶಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಇದರಿಂದ ದೇಶದ ಜನತೆ ಸಂಕಷ್ಟ ಎದುರಿಸುವಂತಾಗಿದೆ. ಬಿಜೆಪಿ ಲೋಕಸಭೆ ಚುನಾವಣೆಗೂ ಮುಂಚೆ ನೀಡಿದ್ದ ಭರವಸೆಗಳು ಈಗ ಹಾಸ್ಯಾಸ್ಪದವಾಗಿವೆ. ಕೇಂದ್ರ ಸರ್ಕಾರ ಜನರ ಹಣದಿಂದ ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡದೇ ಪ್ರಧಾನಿ ಮೋದಿ ಸ್ನೇಹಿತರು ಲೂಟಿ ಮಾಡಿಕೊಂಡು ಹೋಗಲು ಅವಕಾಶ ಕಲ್ಪಿಸಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ, ಡಾಲರ್‌ ಎದುರು ರೂಪಾಯಿ ಮೌಲ್ಯ ಕೂಡ ದಾಖಲೆ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಸಂಪೂರ್ಣ ಮೌನ ವಹಿಸಿದ್ದಾರೆ. ಹಣಕಾಸು ಸಚಿವ ಅರುಣ್‌ ಜೇಟಿÉ ಪೆಟ್ರೋಲ್‌,ಡಿಸೇಲ್‌, ಅಡುಗೆ ಅನಿಲ ಬೆಲೆ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವುದು ಬಿಜೆಪಿಗೆ ಜನ ಸಾಮಾನ್ಯರ ಹಿತ ಮುಖ್ಯವಲ್ಲ ಎಂದು ಹೇಳಿದರು.

Trending videos

Back to Top