CONNECT WITH US  

ರಾಜಕೀಯ ಘನತೆ ಕಳೆದುಕೊಳ್ಳುತ್ತಿದೆ

ಜೈಪುರ: ದೇಶದಲ್ಲಿ ರಾಜಕೀಯವು ಘನತೆ ಕಳೆದುಕೊಳ್ಳುತ್ತಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. 

ಜೈಪುರದಲ್ಲಿ ಶನಿವಾರ ನಡೆದ ಎಡಪಕ್ಷಗಳ ಜಂಟಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ರಾಜಕೀಯ ಎನ್ನುವುದು ಯಾವತ್ತೂ ಸಾರ್ವಜನಿಕರ ಹಿತಾಸಕ್ತಿಯ ಸುತ್ತಲೂ ಸುತ್ತುತ್ತಿರಬೇಕು. ಆದರೆ, ಈಗೀಗ ರಾಜಕೀಯವು ಘನತೆಯನ್ನೇ ಕಳೆದುಕೊಳ್ಳುತ್ತಿದೆ. ರೈತರಿಗೆ ಅನ್ಯಾಯ ಎಸಗಲಾಗುತ್ತಿದೆ, ಜಾತಿ-ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವ ಕೆಲಸ ನಡೆಯುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದಿದ್ದಾರೆ. ಜೆಡಿಎಸ್‌, ಎಸ್‌ಪಿ, ಸಿಪಿಐ, ಎಂಸಿಪಿ, ಆರ್‌ಎಲ್‌ಡಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Trending videos

Back to Top