CONNECT WITH US  

ಪ್ರತ್ಯೇಕ ಅಪಘಾತ:7 ಜನರ ದುರ್ಮರಣ

ಮುಧೋಳ/ಹರಿಹರ: ಎರಡು ಪ್ರತ್ಯೇಕ  ರಸ್ತೆ ಅಪಘಾತದಲ್ಲಿ 7 ಜನ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಹರಿಹರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಡಿವೈಡರ್‌ಗೆ ಡಿಕ್ಕಿಯಾಗಿ ನಂತರ ಎದುರಿಂದ ಬಂದ ಲಾರಿಗೆ ಗುದ್ದಿದ ಪರಿಣಾಮ ನಾಲ್ವರು ಮೃತಪಟ್ಟು ಇನ್ನಿಬ್ಬರು ಗಾಯಗೊಂಡಿದ್ದಾರೆ. 

ಬೆಂಗಳೂರು ರಾಜಾಜಿನಗರದ ವಿನಯ್‌ (25), ಯಾದಗಿರಿ ತಾಲೂಕು ಫೈದಾಪುರ ಗ್ರಾಮದ ಸಿದ್ದಪ್ಪ (28), ಶಿರಾ ತಾಲೂಕು ಅಗ್ರಹಾರ ಗ್ರಾಮದ ಅಜ್ಜಪ್ಪ (25) ಸ್ಥಳದಲ್ಲೇ ಮೃತಪಟ್ಟರೆ, ತೀವ್ರ ಗಾಯಗೊಂಡಿದ್ದ ಕುಣಿಗಲ್‌ನ ವಿನಯ್‌ (26) ದಾವಣಗೆರೆ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಗಿರೀಶ್‌ ಮತ್ತು ಕಿರಣ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಇನ್ನೊಂದೆಡೆ ಮುಧೋಳ ಮುಖ್ಯ ರಸ್ತೆಯ ಹೊರವಲಯದ ಬಳ್ಳೂರ ಕ್ರಾಸ್‌ ಬಳಿ ಮಾರುತಿ ವ್ಯಾನ್‌ಗೆ ಲಾರಿ ಡಿಕ್ಕಿ ಹೊಡೆದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲಕೇರಿ ಗ್ರಾಮದ ಮಾರುತಿ ವ್ಯಾನ್‌ ಚಾಲಕ ಕಾಶೀಮಸಾಬ್‌ ಮುಜಾವರ(42), ಅಫ್ರಿನ್‌ ಕಾಶೀಮಸಾಬ ಮುಜಾವರ (35) ಹಾಗೂ ಶಬೀನಾ ನೂರಅಹಮ್ಮದ (40) ಮೃತಪಟ್ಟಿದ್ದಾರೆ. ಸಾನಿಯಾ (12) ಹಾಗೂ ಸೋಹೆಲ್‌ (9) ಗಾಯಗೊಂಡಿದ್ದಾರೆ.


Trending videos

Back to Top