CONNECT WITH US  

ರಾಜಕಾರಣ ಫ‌ುಟ್‌ಬಾಲ್‌ ಅಲ್ಲ,ಚೆಸ್‌ ಗೇಮ್‌;ಎನೇ ಬಂದರೂ ಸಿದ್ದ:ಡಿಕೆಶಿ

ಹಣ್ಣು ಕೆಂಪಾಗಿದೆ, ಕಲ್ಲು ಹೊಡೆದಿದ್ದಾರೆ ಎಂದ ಸಚಿವ

ಬೆಂಗಳೂರು: ರಾಜಕಾರಣ ಫ‌ುಟ್‌ಬಾಲ್‌ ಗೇಮ್‌ ಅಲ್ಲ, ಅದು ಚೆಸ್‌ ಗೇಮ್‌. ನಾನು ಯಾವುದೇ ನೊಟೀಸ್‌ ಬಂದರೂ ಹೋಗಿ ಉತ್ತರ ಕೊಡಲು ಸಿದ್ದ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಭಾನುವಾರ ಹೇಳಿಕೆ ನೀಡಿದ್ದಾರೆ. 

 ಐಟಿ ದಾಳಿ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಸದ್ಯದಲ್ಲೇ ಎಫ್ಐಆರ್‌ ದಾಖಲಿಸಿಕೊಂಡು ,ವಶಕ್ಕೆ ಪಡೆಯಲಿದೆ ಎನ್ನುವ ಕುರಿತಾಗಿ ತಮ್ಮ ನಿವಾಸದ ಎದುರು ಸುದ್ದಿಗಾರರೊಂದಿಗೆ ಮಾತನಾಡಿದರು. 

 ನನಗೆ ಇಡಿಯ ನೊಟೀಸ್‌ ಬಂದಿಲ್ಲ. ಹಿಂದೆ ಐಟಿಯವರು ಕರೆದಿದ್ದರು, ವಿಚಾರಣೆಗೆ ತೆರಳಿದ್ದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಕ್ರಿಮಿನಲ್‌ ಅಲ್ಲ, ಹಣವನ್ನು ವಿದೇಶಕ್ಕೆ ಕಳುಹಿಸಿಲ್ಲ, ಅಲ್ಲಿಂದ ಬಂದೂ ಇಲ್ಲ. ದೆಹಲಿಯಲ್ಲಿ ನನಗೆ 2 ಸ್ವಂತ ಮನೆ ಇದೆ, ಅಲ್ಲಿ ಯಾವುದೇ ಹಣ ಇಲ್ಲ. ನನ್ನ ಎಲ್ಲಾ ಆಸ್ತಿಯನ್ನು ಘೋಷಣೆ ಮಾಡಿದ್ದೇನೆ. ನನ್ನ ಸ್ನೇಹಿತರೂ ಘೋಷಿಸಿದ್ದಾರೆ ಎಂದರು. 

ಕಾನೂನು ಇದೆ, ನ್ಯಾಯಾಲಯ ಇದೆ, ಪ್ರಜಾಪ್ರಭುತ್ವ  ಮತ್ತು ಸಂವಿಧಾನದಲ್ಲಿ ನಂಬಿಕೆ ಇದೆ. ಯಾವುದೇ ನೊಟೀಸ್‌ ಬಂದರೂ ಉತ್ತರ ಕೊಡಲು ಸಿದ್ದ. ನನಗೆ ಆತಂಕ, ಗಾಬರಿ ಇಲ್ಲ ಎಂದರು. 

ಹಣ್ಣು ಕೆಂಪಾಗಿದೆ, ಕಲ್ಲು ಹೊಡೆದಿದ್ದಾರೆ!
ಹಣ್ಣು ಕೆಂಪಾದರೆ ತಾನೇ ಕಲ್ಲು ಹೊಡಿತಾರೆ, ನೋಡಲು ಚೆನ್ನಾಗಿದ್ದರೆ ತಾನೇ ಎಲ್ಲರೂ ನೋಡುವುದು. ವಿಕಾರವಾಗಿದ್ದವರನ್ನು ಯಾರಾದರೂ ನೋಡುತ್ತಾರಾ ಎಂದು ಪ್ರಶ್ನಿಸಿದರು.

40 ವರ್ಷ ರಾಜಕಾರಣ ಮಾಡಿದ್ದೇನೆ. ಕಲ್ಲೇಟು ಬಿದ್ದ ಚಪ್ಪಡಿ ತಾನೇ ವಿಗ್ರಹವಾಗುವುದು ಎಂದರು. 

ಸರಣಿ ಸಭೆ
ಸಚಿವ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಆಪ್ತರು, ಲೆಕ್ಕಪರಿಶೋಧಕರು ಮತ್ತು ಹಿರಿಯ ಕಾಂಗ್ರೆಸ್‌ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು  ಮುಂದೆ ಯಾವ ಕ್ರಮ ಕೈಗೊಳ್ಳಬೇಕೆಂದು ಶನಿವಾರ ತಡರಾತ್ರಿಯವರೆಗೂ ಸರಣಿ ಮಾತುಕತೆಗಳನ್ನು ನಡೆಸಿರುವ ಬಗ್ಗೆ ವರದಿಯಾಗಿದೆ. 

ಕಾಂಗ್ರೆಸ್‌ ಹಿರಿಯ ನಾಯಕ ಅಹ್ಮದ್‌ ಪಟೇಲ್‌ ಅವರೊಂದಿಗೂ ಮಾತುಕತೆ ನಡೆಸಿದ್ದು ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂದು ಚಿರ್ಚಿಸಿದ್ದಾರೆ ಎನ್ನಾಲಾಗಿದೆ.


Trending videos

Back to Top