CONNECT WITH US  

ಯುಪಿಎ ಅವಧಿಯಲ್ಲೇಕೆ ಬಂದ್‌ ಮಾಡಲಿಲ್ಲ?

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, ಕಾಂಗ್ರೆಸ್‌, ಜೆಡಿಎಸ್‌ ಸೇರಿ ಇತರ ಪಕ್ಷಗಳು ಭಾರತ್‌ ಬಂದ್‌ಗೆ ಕರೆ ನೀಡಿರುವುದನ್ನು ಬಿಜೆಪಿ ಖಂಡಿಸುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗಿರುವ ಕಾರಣ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿದೆ. ಹಾಗಿದ್ದರೂ ಪ್ರಧಾನಿ ನರೇಂದ್ರ ಮೋದಿಯವರೇ ಪೆಟ್ರೋಲ್‌ ದರ ಹೆಚ್ಚಳಕ್ಕೆ ಕಾರಣ ಎಂದು ಆರೋಪಿಸುವುದು ಸರಿಯಲ್ಲ ಎಂದರು.

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲೂಪೆಟ್ರೋಲ್‌ ದರ 81.75 ರೂ.ಗೆ ಏರಿಕೆಯಾದ ಉದಾಹರಣೆ ಇದೆ. ಆಗಲೂ ಸಾಕಷ್ಟು ಬಾರಿ ಬೆಲೆ ಏರಿಕೆಯಾಗಿದ್ದು ಆಗ ಏಕೆ ಬಂದ್‌ಗೆ ಕರೆ ನೀಡಲಿಲ್ಲ.

ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಕಾರಣ ಕಚ್ಚಾತೈಲದ ಬೆಲೆ ಹೆಚ್ಚಾಗುತ್ತಿದೆ. ಕಚ್ಚಾತೈಲ ಬೆಲೆ ಶೇ.73.44ರಷ್ಟು ಹೆಚ್ಚಾದರೂ ಪೆಟ್ರೋಲ್‌ ದರ ಶೇ.29.58ರಷ್ಟು ಮಾತ್ರ ಏರಿಕೆಯಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ. ಇಷ್ಟಾದರೂ ರಾಜಕೀಯ ದ್ವೇಷ ಕಾರಣಕ್ಕೆ ಬಂದ್‌ಗೆ ಕರೆ ನೀಡಿರುವುದು ಖಂಡನೀಯ ಎಂದು ದೂರಿದರು.

ಒಂದು ಲೀಟರ್‌ ಪೆಟ್ರೋಲ್‌ ದರದಲ್ಲಿ 19.50ರೂ.ಕೇಂದ್ರ ಸರ್ಕಾರ ಪಡೆಯುತ್ತದೆ ಎಂಬ ದಡ್ಡತನದ ಹೇಳಿಕೆ ನೀಡಲಾಗುತ್ತಿದೆ. 19.50 ರೂ.ನಲ್ಲಿ 8 ರೂ.ನೇರವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸೆಸ್‌ ರೂಪದಲ್ಲಿ
ಸಂದಾಯವಾಗಲಿದೆ. ಉಳಿದ 11.50 ರೂ.ನಲ್ಲಿ ಶೇ.42ರಷ್ಟು ಪಾಲನ್ನು ರಾಜ್ಯ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ನೀಡಲಾಗುತ್ತದೆ. 6.66 ರೂ. ಮಾತ್ರ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ ಎಂದು ಸ್ಪಷ್ಟನೆ ನೀಡಿದರು.ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥ ನಾರಾಯಣ, ಸಹ ವಕ್ತಾರ ಪ್ರಕಾಶ್‌ ಉಪಸ್ಥಿತರಿದ್ದರು.


Trending videos

Back to Top