“ಸಹಜ ಕೃಷಿ ಮಾಡುವ ರೈತ ಆತ್ಮಹತ್ಯೆಗೆ ಶರಣಾಗಿಲ್ಲ’


Team Udayavani, Sep 10, 2018, 7:00 AM IST

subhash-palekar.jpg

ಬೆಂಗಳೂರು: ಸಾಲಸೋಲ ಮಾಡಿ ಹಾಕಿದ ಬಂಡವಾಳವೇ ಬಾರದ ಸ್ಥಿತಿ ಕೃಷಿಯಲ್ಲಿದೆ. ಆದರೆ ಮನಸ್ಸು ಮಾಡಿದರೆ, ಅದೇ ಭೂಮಿಯಲ್ಲಿ ಬಂಡವಾಳ ಇಲ್ಲದೆ ಎಕರೆಗೆ ಪ್ರತಿ ತಿಂಗಳಿಗೆ 25 ಸಾವಿರ ರೂ. ಎಣಿಸಬಹುದು. ಅಲ್ಲದೆ, ತಮ್ಮೂರಲ್ಲಿ ನೆಮ್ಮದಿ ಜೀವನ ಕಟ್ಟಿಕೊಳ್ಳಬಹುದು.

ಹೌದು, ಕೃಷಿ ಲಾಭದಾಯಕವಾಗಿ ಪರಿಣಮಿಸದ ಹಿನ್ನೆಲೆಯಲ್ಲಿ ಯುವಕರು ನಗರಗಳತ್ತ ಮುಖಮಾಡುತ್ತಿ ದ್ದಾರೆ. ಅಲ್ಲಿ ನಿತ್ಯ 18 ತಾಸು ದುಡಿದು, ತಿಂಗಳಿಗೆ ಅಬ್ಬಬ್ಟಾ ಎಂದರೆ 8-10 ಸಾವಿರ ರೂ. ಗಳಿಸುತ್ತಾರೆ. ಇದರಿಂದ ಯುವಕ, ಆತನ ಪೋಷಕರಿಬ್ಬರಿಗೂ ನೆಮ್ಮದಿಯಿಲ್ಲ. ಆದರೆ, ಊರಲ್ಲಿರುವ ಜಮೀನಿನಲ್ಲೇ ನಯಾಪೈಸೆ ಖರ್ಚಿಲ್ಲದೆ (ಕೃಷಿ ಪರಿಕರಗಳಿಗೆ), ತಿಂಗಳಿಗೆ 25 ಸಾವಿರ ರೂ.ಗಳಿಸಲು ಸಾಧ್ಯವಿದೆ ಎನ್ನುತ್ತಾರೆ ಶೂನ್ಯ ಬಂಡವಾಳ ಸಹಜ ಕೃಷಿ ಪಿತಾಮಹ ಸುಭಾಷ್‌ ಪಾಳೇಕರ್‌.

ಯುವಕರಿಗೆ “ಮರಳಿ ಮಣ್ಣಿಗೆ’ ಕಾರ್ಯಕ್ರಮದಡಿ ಕೃಷಿ ಪಾಠ ಮಾಡಲು ಬೆಂಗಳೂರಿಗೆ ಆಗಮಿಸಿರುವ ಸುಭಾಷ್‌ ಪಾಳೇಕರ್‌, ಹಲವು ವಿಷಯಗಳ ಕುರಿತು “ಉದಯವಾಣಿ’ಗೆ ಸಂದರ್ಶನ ನೀಡಿದ್ದಾರೆ.

ಯುವಕರ ವಲಸೆಯಿಂದ ಕೃಷಿ ಕ್ಷೇತ್ರ “ಬರ’ ಎದುರಿಸುತ್ತಿದೆ. ಇದಕ್ಕೆ ಪರಿಹಾರ ಇಲ್ಲವೇ?
             ಇದೆ, ಕೃಷಿ ಲಾಭದಾಯಕ ಎಂಬ ಭರವಸೆ ಮೂಡ ಬೇಕು. ಈಗ ಅನುಸರಿಸುತ್ತಿರುವ ಪದ್ಧತಿಯಲ್ಲಿ ಅದು ಸಾಧ್ಯವಿಲ್ಲ. ಶೂನ್ಯ ಬಂಡವಾಳದಲ್ಲಿ ಸಾವಿರಪಟ್ಟು ಆದಾಯ ಗಳಿಕೆಯಿಂದ ಮಾತ್ರ ಸಾಧ್ಯ. ಇದಕ್ಕೆ ಸಹಜ ಕೃಷಿ ಪದಟಛಿತಿಯಲ್ಲಿ ಪರಿಹಾರ ಇದೆ. ನಗರಗಳಲ್ಲಿ ತಿಂಗಳಿಗೆ 8-10 ಸಾವಿರಗಳಿಸುತ್ತಿದ್ದ ಯುವಕರು ಇಂದು ಸಹಜ ಕೃಷಿಯಿಂದ ವಾರ್ಷಿಕ 3 ಲಕ್ಷ ರೂ. ಗಳಿಸುತ್ತಿದ್ದಾರೆ.

ರಾಜ್ಯ ಸರ್ಕಾರದ ಸ್ಪಂದನೆ ಹೇಗಿದೆ?
             ಈಗಾಗಲೇ ಸಿಎಂ ಕುಮಾರಸ್ವಾಮಿ ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಸರ್ಕಾರದ ಮುಂದೆ ನಮ್ಮ ಯಾವುದೇ ಬೇಡಿಕೆ ಇಲ್ಲ ಮತ್ತು ಬಯಸುವುದೂ ಇಲ್ಲ. ಬದಲಿಗೆ ಸರ್ಕಾರವು ನಮ್ಮಿಂದ ಮಾರ್ಗದರ್ಶನ ಬಯಸುತ್ತಿದೆ. ಅದಕ್ಕೆ ನಾನು ಮುಕ್ತ ಮನಸ್ಸು ಹೊಂದಿದ್ದೇನೆ.

ಕರ್ನಾಟಕದಲ್ಲಿ ಅತಿ ಕನಿಷ್ಠ ಮತ್ತು ಗರಿಷ್ಠ ಮಳೆಯಾಗುವ ಪ್ರದೇಶಗಳೂ ಇವೆ. ಅದೆಲ್ಲಕ್ಕೂ ಈ ಸಹಜ ಕೃಷಿ ಪದ್ಧತಿ ಅನ್ವಯ ಆಗುತ್ತದೆಯೇ?
           ಎಲ್ಲ ಪ್ರಕಾರದ ಬೆಳೆಗಳಿಗೂ ಈ ಪದ್ಧತಿ ಅನುಸರಿಸಬಹುದು. ಪ್ರತಿ ವಲಯಕ್ಕೂ ಒಂದೊಂದು ಮಾದರಿಗಳನ್ನು ರೂಪಿಸಲಾಗಿದ್ದು,ಅದಕ್ಕೆ ತಕ್ಕಂತೆ ಅನುಷ್ಠಾನಗೊಳಿಸಲಾಗುವುದು.ಅಷ್ಟಕ್ಕೂ ಈ ಪದಟಛಿತಿಯಲ್ಲಿ ಗಿಡಗಳು ಶೇ.10ರಷ್ಟು ನೀರು ಮಾತ್ರ ಭೂಮಿಯಿಂದ ಪಡೆಯಲಾಗುತ್ತದೆ. ಉಳಿದ ಶೇ. 90ರಷ್ಟು ನೀರು, ವಿದ್ಯುತ್‌ ಅನ್ನು ವಾತಾವರಣದಿಂದಲೇ ಹೀರಿಕೊಳ್ಳುತ್ತವೆ.

ಆದರೆ, ಈ ಪದ್ಧತಿ ಈಗಾಗಲೇ “ಔಟ್‌ಡೇಟೆಡ್‌’ ಎಂಬ ಮಾತುಗಳು ಕೇಳಿಬರುತ್ತಿವೆ?
          ಕೆಲವರು ಸಹಿಸಲಾಗದವರು ಮಾಡುತ್ತಿರುವ ಅಪಪ್ರಚಾರ ಇದು. ಈಗಲೂ ಸುಮಾರು 50 ಲಕ್ಷ ಜನ ನೇರವಾಗಿ ಈ ಪದಟಛಿತಿ ಅನುಸರಿಸುತ್ತಿದ್ದಾರೆ. ಈ ಪೈಕಿ ಬಹುತೇಕರು ಯುವಕರು.ಸಾಮಾಜಿಕ ಜಾಲತಾಣಗಳಲ್ಲೂ ಈ ಪದ್ಧತಿಯನ್ನು ನೋಡಿ, ಫಾಲೋ ಮಾಡುತ್ತಿರುವವರ ಸಂಖ್ಯೆ ಲೆಕ್ಕವಿಲ್ಲ.

ಕೃಷಿ ಇಂದು ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಸಹಜ ಕೃಷಿ ಪರಿಹಾರ ಆಗಬಹುದೇ?
          ಭವಿಷ್ಯದ ತಲೆಮಾರಿಗೆ ಸಹಜ ಕೃಷಿ ಪದ್ಧತಿಯೇ ಪರಿಹಾರ. ಯಾಕೆಂದರೆ, ಕೃಷಿ ವಿಜ್ಞಾನಿಗಳು, ಸರ್ಕಾರಗಳು ಸೇರಿ ಎಲ್ಲ ಬಾಗಿಲುಗಳೂ ಮುಚ್ಚಿಬಿಟ್ಟಿವೆ. ನಮ್ಮಲ್ಲಿ ಆಯ್ಕೆಗಳು ಮತ್ತು ಅವಕಾಶಗಳು ಇವೆ.

ಕೃಷಿ ವಿವಿಗಳ ಪ್ರಾಧ್ಯಾಪಕರು ಏನು ಹೇಳುತ್ತಾರೆ?
          ವಿವಿಗಳು ಕೇವಲ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (ಐಸಿಎಆರ್‌) ನೀಡಿದ ಪಠ್ಯ ಬೋಧಿಸಲು ಸೀಮಿತವಾಗಿವೆ. ಕೃಷಿ ವಿಜ್ಞಾನಿಗಳೇ ಹೇಳುವಂತೆ ರಾಸಾಯನಿಕ ಸಿಂಪಡಣೆಯಿಂದ ಭೂಮಿಯ ಫ‌ಲವತ್ತತೆ, ಉತ್ಪಾದಕತೆ ಕಡಿಮೆ ಆಗುತ್ತಿದೆ. ಹಾಗಿದ್ದರೆ, ಯಾಕೆ ಇದನ್ನು ಪ್ರೋತ್ಸಾಹಿಸುತ್ತೀರ ಎಂದು ಇತ್ತೀಚೆಗೆ ಪ್ರತಿಷ್ಠಿತ ಪಂಜಾಬ್‌ ವಿವಿ ವಿಜ್ಞಾನಿಗಳೊಂದಿಗಿನ ಸಂವಾದದಲ್ಲಿ ನಾನು ಕೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ವಿಜ್ಞಾನಿಗಳು “ಇದು ಅನಿವಾರ್ಯ, ನಮ್ಮ ಮುಂದೆ ಬೇರೆ ಆಯ್ಕೆಗಳೇ ಇಲ್ಲ’ ಎಂದರು.

ರೈತರ ಆತ್ಮಹತ್ಯೆ ಕೃಷಿಯನ್ನು ದೊಡ್ಡ ಪಿಡುಗಿನ ರೂಪದಲ್ಲಿ ಕಾಡುತ್ತಿದೆ?
        ದೇಶಾದ್ಯಂತ ಸುಮಾರು 7 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ನಾನು ನೇರ
ಸವಾಲು ಹಾಕುತ್ತೇನೆ, ಈ ಆತ್ಮಹತ್ಯೆಗಳಲ್ಲಿ ಸಹಜ ಕೃಷಿ ಪದ್ಧತಿ ಅನುಸರಿಸುತ್ತಿರುವ ರೈತನ ಒಂದೇ ಒಂದು ಉದಾಹರಣೆ ನೀಡಲಿ. ಅಷ್ಟೇ ಯಾಕೆ,ಬೆಳೆ ಒಣಗಿರುವುದನ್ನು ತೋರಿಸಲಿ. ಇದು ಸಹಜ ಕೃಷಿಯ ವೈಶಿಷ್ಟé.

ಶೂನ್ಯ ಬಂಡವಾಳ ಸಹಜ ಕೃಷಿ ಬಗ್ಗೆ ಹೇಳಿ…
        ಕೃಷಿಗೆ ಸಂಬಂಧಿಸಿದ ಬೀಜ, ಗೊಬ್ಬರದಂತಹ ಪರಿಕರಗಳನ್ನು ಮಾರುಕಟ್ಟೆಯಿಂದ ತರುವಂತಿಲ್ಲ ಮತ್ತು ಬಳಕೆ ಮಾಡುವಂತಿಲ್ಲ. ಮನೆಯಲ್ಲೇ ತಯಾರು ಮಾಡಲಾಗುವುದು. ಮಿಶ್ರ ಬೆಳೆಗಳಿಂದ ಬರುವ ಆದಾಯದಿಂದಲೇ ಈ ಕೃಷಿ ವೆಚ್ಚವನ್ನು ನಿಭಾಯಿಸಿ, ಪ್ರಮುಖ ಬೆಳೆಯಿಂದ ಬರುವ ಆದಾಯವನ್ನು ನಿವ್ವಳ ಲಾಭವಾಗಿ ಪರಿಗಣಿಸುವುದಾಗಿದೆ.

– ವಿಜಯಕುಮಾರ ಚಂದರಗಿ
 

ಟಾಪ್ ನ್ಯೂಸ್

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.