CONNECT WITH US  

ಸರ್ಕಾರದ ನಡೆಯಿಂದಾಗಿ ನಿಯೋಗದಲ್ಲಿ ತೆರಳಲಿಲ್ಲ

ಬೆಂಗಳೂರು: ಒಂದೆಡೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರುದ್ಧ ಭಾರತ ಬಂದ್‌ ಹೆಸರಿನಲ್ಲಿ ರಾಜ್ಯದಲ್ಲಿ ಬೆಂಕಿ ಹೊತ್ತಿಸಿ ಮತ್ತೂಂದೆಡೆ ಅತಿವೃಷ್ಠಿ ಪರಿಹಾರ ಕೋರಿ ಪ್ರಧಾನಿ ಬಳಿ ಹೋಗುವ ಮೈತ್ರಿ ಸರ್ಕಾರದ ನಡವಳಿಕೆಯಿಂದ ಬೇಸತ್ತು ನಿಯೋಗದಿಂದ ದೂರ ಉಳಿದಿರುವುದಾಗಿ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಪ್ರಧಾನಿ ಬಳಿ ನಿಯೋಗ ಹೋಗುವ ಬಗ್ಗೆ ಆಹ್ವಾನವಿದ್ದರೂ ತೆರಳದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭಾರತ್‌ ಬಂದ್‌ ಹೆಸರಿನಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧಿಕ್ಕಾರ ಕೂಗಲು ಹೇಳಿದೆ.

ಬಂದ್‌ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಇದರ ನಡುವೆಯೇ ಅನುದಾನ ಕೋರಿ ಪ್ರಧಾನಿ ಬಳಿ ನಿಯೋಗ ಹೋಗುವುದು ಎಷ್ಟು ಸರಿ? ಮೇಲಾಗಿ ಈಗಾಗಲೇ ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಮುಖ್ಯಮಂತ್ರಿಗಳ ಜತೆ ದೆಹಲಿಗೆ ತೆರಳಲಿಲ್ಲ ಎಂದು ಸ್ಪಷ್ಟಪಡಿಸಿದರು.

Trending videos

Back to Top